ವಾಷಿಂಗ್ಟನ್ – ಅಮೆರಿಕಾದಲ್ಲಿ ಭಾರತೀಯ ಮೂಲದ ಮತ್ತೊಬ್ಬ ವ್ಯಕ್ತಿಗೆ ಮಹತ್ವದ ಹುದ್ದೆ ಲಭಿಸಿದೆ. ಅಮೆರಿಕಾ ಅಂತರಾಷ್ಟ್ರೀಯ ಅಭಿವೃದ್ದಿ ಸಂಸ್ಥೆ( ಯು ಎಸ್ ಎ ಐ ಡಿ) ಮಿಷನ್ ನಿರ್ದೇಶಕಿಯಾಗಿ ವೀಣಾ ರೆಡ್ಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವಿಷಯವನ್ನು ಸಂಸ್ಥೆ ಟ್ವಿಟ್ಟರ್ ಪುಟದ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ.
ಯುಎಸ್ಐಐಡಿ ಮಿಷನ್ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಭಾರತೀಯ-ಅಮೇರಿಕನ್ ವೀಣಾ ರೆಡ್ಡಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಈ ನೇಮಕಾತಿಯ ಬಗ್ಗೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಭಾರತೀಯ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ವೀಣಾ ಅವರನ್ನು ಅಭಿನಂದಿಸಿದ್ದಾರೆ. ವೀಣಾ ರೆಡ್ಡಿ ಈವರೆಗೆ ಇದೇ ಸಂಸ್ಥೆಯಲ್ಲಿ ವಿದೇಶಿ ಸೇವಾ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಾಂಬೋಡಿಯಾ ಮಿಷನ್ ನಿರ್ದೇಶಕರಾಗಿ ಆಗಸ್ಟ್ 2017 ರಿಂದ ಸೇವೆಸಲ್ಲಿಸಿದ್ದರು. ಹೈಟಿ ಭೂಕಂಪದ ಸಂದರ್ಭದಲ್ಲಿ ರಕ್ಷಣಾ-ಅಭಿವೃದ್ಧಿ ಚಟುವಟಿಕೆಗಳ ಮೇಲ್ವಿಚಾರಕರಾಗಿ ಉತ್ತಮ ಕಾರ್ಯನಿರ್ವಹಿಸಿದ್ದರು.