ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಸ್ತ್ರೀ ಶಕ್ತಿ ದಂಘಟನಾ ಸಮಿತಿ ರಚಿಸಲಾಗಿದ್ದು ನನ್ನ ಅಧ್ಯಕ್ಷತೆಯಲ್ಲಿ 40 ಜನ ಪ್ರಮುಖ ಮಹಿಳೆಯರ ತಂಡವನ್ನು ರಚಿಸಲಾಗಿದೆ ಎಂದು ಉಮಾಶ್ರೀ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಚುನಾಬಣೆಯಲ್ಲಿ ಗೆದ್ದ ಕಾಂಗ್ರೆಸ್ ಮಹಿಳಾ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಪಕ್ಷ ಸಂಘಟಿಸುವ ಯೋಜನೆ ಇದೆ. ಇವರ ಮೂಲಕ ಎಲ್ಲ ಮಹಿಳೆಯರನ್ನು ಸಂಘಟಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತೇವೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಸಂಘಟಿಸಿ ಇದೇ 24 ರಂದು ಸಂಗನಕಲ್ಲು ರಸ್ತೆಯ ಕೆಆರ್ ಎಸ್ ಫಂಕ್ಷನ್ ಹಾಲ್ ನಲ್ಲಿ ನಾ ನಾಯಕಿ ಎನ್ನುವ ಪೈಲೆಟ್ ಕಾರ್ಯಕ್ರಮ ಮಾಡುವುದಾಗಿ ಹೇಳಿದರು. ಇದು ಕೇವಲ ಬಳ್ಳಾರಿ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಕಾರ್ಯಕ್ರಮವಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಧುರೀಣೆಯರಾದ ಮಂಜುಳಾ ನಾಯ್ಡು, ಬಿ.ಭಾಗ್ಯಲಕ್ಷ್ಮಿ, ಎಂ.ಶಾಂತಮ್ಮ, ಕುಮಾರಮ್ಮ, ಸೌಭಾಗ್ಯಮ್ಮ, ಕಮಲಾ ಬಸವರಾಜ, ಶೋಭಾ ಕಳಿಂಗ, ಪರ್ವೀನ್,ಭಾನು, ಮಲ್ಲೇಶ್ವರಿ, ಎಂ.ಪಿ.ಕಮಲಾ, ಪದ್ಮ, ಚಂಪಾ ಚವ್ಹಾಣ್ ಮತ್ತಿತರರು ಇದ್ದರು.