ಬೆಳಗಾಯಿತು ವಾರ್ತೆ
ಬಳ್ಳಾರಿ : ಜಿಲ್ಲಾ ಬಲಿಜ ಸಂಘದ ವತಿಯಿಂದ ಬಲಿಜ ಸೇರಿದಂತೆ ಎಲ್ಲಾ ಸಮುದಾಯದ ವಧುವರರಿಗೆ ಉಚಿತ ಸಾಮೂಹಿಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಲಿಜ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಮುರಳಿ ಕೃಷ್ಣ ಅವರು ತಿಳಿಸಿದ್ದಾರೆ.
ನಗರದ ಪತ್ರಿಕ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ನಮ್ಮ ಕುಲಬಾಂಧವರು ಸೇರಿ ಬಳ್ಳಾರಿ ನಗರದ ವಡ್ಡರ ಬಂಡೆಯ ಬಾಲಾಜಿ ರಾವ್ ರಸ್ತೆಯಲ್ಲಿರುವ ಶ್ರೀಮತಿ ಲಕ್ಷ್ಮೀದೇವಿ ಎಸ್ ಲಿಂಗಣ್ಣ ಬಲಿಜ ಭವನದಲ್ಲಿ ಪ್ರಪ್ರಥಮವಾಗಿ ಸರ್ವ ಧರ್ಮದ ಉಚಿತ ಸಾಮೂಹಿಕ ವಿವಾಹಗಳನ್ನು ಆಗಸ್ಟ್ 7ನೇ ತಾರೀಕಿನಂದು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸಾಮೂಹಿಕ ವಿವಾಹದಲ್ಲಿ ನೋಂದಣಿ ಮಾಡಿಸುವರು ವಧುವಿಗೆ 18 ವರ್ಷ ತುಂಬಿರಬೇಕು ವರನಿಗೆ 21 ವರ್ಷ ತುಂಬಿರಬೇಕು. ವಯಸ್ಸಿನ ದೃಢೀಕರಣಕ್ಕಾಗಿ ಕಡ್ಡಾಯವಾಗಿ ಶಾಲೆಯ ವರ್ಗಾವಣೆ ಪ್ರತಿ ಅಥವಾ ದೃಢೀಕರಣ ಪತ್ರ ಅಥವಾ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡತಕ್ಕದ್ದು ಎಂದು ಅವರು ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಬಲಿಜ ಸಂಘದ ಪದಾಧಿಕಾರಿಗಳು ಮುಖಂಡರು ಇದ್ದರು.
ಹೆಚ್ಚಿನ ಮಾಹಿತಿಗಾಗಿ ಅಥವಾ ನೊಂದಾಯಿಸಲು ಸಂಪರ್ಕಿಸಿ.08392278492.9986165053.9901962666.ಸಂಪರ್ಕಿಸಲು ಕೋರಿದ್ದರೆ.