ಟೋಕಿಯೊ– ಕೋವಿಡ್-19 ಭೀತಿಯ ಮಧ್ಯ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಪ್ರಸಕ್ತ ಸಾಲಿನ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಅಭೂತ್ಪುರ್ವ ಚಾಲನೆ ಸಿಕ್ಕಿದೆ. ಐದು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಜುಲೈ 23 ರಂದು ಟೋಕಿಯೊ ಒಲಿಂಪಿಕ್ಸ್ 2020 ರ ಉದ್ಘಾಟನಾ ಸಮಾರಂಭದೊಂದಿಗೆ ಅತಿದೊಡ್ಡ ಕ್ರೀಡಾಕೂಟ ಪ್ರಾರಂಭವಾಗಿದೆ. ಪಟಾಕಿ ಮತ್ತು ವರ್ಣರಂಜಿತ ಬೆಳಕಿನೊಂದಿಗೆ ಒಲಿಂಪಿಕ್ಸ್ ಪ್ರಾರಂಭವಾಯಿತು. ಇದೇ ವೇಳೆ ಭರ್ಜರಿ ಪಟಾಕಿಗಳನ್ನು ಸಿಡಿಸಿ ಮೈದಾನದಲ್ಲಿ ಬಣ್ಣದ ಚಿತ್ತಾರವನ್ನು ಮೂಡಿಸಲಾಯಿತು. ಬಳಿಕ ನಡೆದ ಭವ್ಯ ಕಾರ್ಯಕ್ರಮದಲ್ಲಿ ಜಪಾನ್ ಕಲಾವಿದರು, ವಿಶ್ವದ ಮುಂದೆ ತಮ್ಮ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಅನಾವರಣ ಮಾಡಿದರು.