ಬಳ್ಳಾರಿ: ರಾಜ್ಯ ಸರ್ಕಾರ ರಾಜ್ಯದಾದ್ಯಂತ ಎಲ್ಲಾ ಚಿತ್ರ ಮಂದಿರಗಳಿಗೆ ಶೇ.50%ರಷ್ಟು ಆಸನ ವ್ಯವಸ್ಥೆಗಳೊಂದಿಗೆ ಚಿತ್ರಮಂದಿರ ಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದರು ಯಾವುದೇ ಹೊಸ ಚಿತ್ರಗಳು ರೀಲೀಸ್ ಮಾಡದ ಕಾರಣ ನಗರದಲ್ಲಿ ಚಿತ್ರ ಮಂದಿರಗಳು ಒಪನ್ ಆಗಿಲ್ಲ ಎಂದು ಚಿತ್ರ ಮಂದಿರಗಳ ಜಿಲ್ಲಾಧ್ಯಕ್ಷರಾದ ಲಕ್ಷ್ಮಿಕಾಂತ ರೆಡ್ಡಿ ಅವರು ಹೇಳಿದರು.
ನಗರದ ನಟರಾಜ್ ಚಿತ್ರಮಂದಿರದಲ್ಲಿ ಮಂಗಳವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು ಬಳ್ಳಾರಿ ನಗರದಲ್ಲಿ 9 ಚಿತ್ರಮಂದಿರಗಳಿವೆ ಕನ್ನಡ , ತೆಲುಗು, ಹಿಂದಿ,ಇಂಗ್ಲೀಷ್ ಭಾಷೆಯ ಯಾವ ಹೊಸ ಚಿತ್ರಗಳು ರಿಲೀಸ್ ಮಾಡಲು ಚಿತ್ರದ ನಿರ್ಮಾಪಕರು ರೆಡಿ ಇಲ್ಲ ಆದ್ದರಿಂದ ನಗರದ ಯಾವ ಚಿತ್ರ ಮಂದಿರಗಳಲ್ಲಿಯೂ ಚಿತ್ರ ಪ್ರದರ್ಶನ ಗಳಿಲ್ಲ ಎಂದು ಹೇಳಿದರು.
ಟಿಕೆಟ್ ಧರ ಹೆಚ್ಚಿಸಲ್ಲ:ಸರ್ಕಾರ ಚಿತ್ರ ಮಂದಿರಗಳಿಗೆ ಶೇ.50ರಷ್ಟು ಆಸನ ವ್ಯವಸ್ಥೆ ಮಾತ್ರ ಅವಕಾಶ ನೀಡಿದ್ದು ಇದರಿಂದ ಚಿತ್ರ ಮಂದಿರದ ಮಾಲೀಕರಿಗೆ ನಷ್ಟವಾಗಲಿದೆ ಆದರೂ ಯಾವುದೇ ಟಿಕೆಟ್ ಧರ ಹೆಚ್ಚಿಸುವುದಿಲ್ಲ ಎಂದರು.
ಥಿಯೇಟರ್ ಕ್ಲೋಸ್ :ಜಿಲ್ಲೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ ಕರೋನಾ ಸೋಂಕಿನ ಮೊದಲನೆ ಅಲೆಯಲ್ಲಿ ಹನ್ನೂಂದು ತಿಂಗಳು, ಕರೋನಾ ಎರಡನೇ ಅಲೆಯಲ್ಲಿ ಮೂರು ತಿಂಗಳು ಚಿತ್ರ ಮಂದಿರಗಳು ಬಂದ್ ಆದ ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸಲಾಗದೇ ಕೊಟ್ಟರು,ಹೂವಿನ ಹಡಗಲಿ, ಕೊಡ್ಲಿಗಿಯಲ್ಲಿನ ಥಿಯೇಟರ್ ಗಳು ಬಂದ್ ಆಗಿವೆ ಎಂದರು