ಡಬ್ಲಿನ್‌ನಲ್ಲಿ ನಡೆಯುತ್ತಿರುವ 1ನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪ್ರವಾಸಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಹಾರ್ದಿಕ್ ಪಾಂಡ್ಯ ಅವರು ಮೊದಲ ಬಾರಿ ಭಾರತ ತಂಡದ ನಾಯಕರಾಗಿ ಸ್ಮರಣೀಯ ಆರಂಭವನ್ನು ಪಡೆದರು.
ಮಳೆಯಿಂದಾಗಿ ಪ್ರತಿ ತಂಡಕ್ಕೆ 12 ಓವರ್‌ಗಳ ಆಟದಲ್ಲಿ ಐರ್ಲೆಂಡ್ ನೀಡಿದ 109 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ಕೇವಲ 9.2 ಓವರ್‌ಗಳಲ್ಲಿ ನಿಗದಿತ ಗುರಿಯನ್ನು ತಲುಪಿತು. ಈ ಮೂಲಕ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ 1-0 ಅಜೇಯ ಮುನ್ನಡೆ ಸಾಧಿಸಿತು.
ಹಾರ್ದಿಕ್ ಪಾಂಡ್ಯ ಭಾರತದ ಟಿ20 ಅಂತಾರಾಷ್ಟ್ರೀಯ ಪಂದ್ಯದ ನಾಯಕನಾದ ಮೊದಲ ಪಂದ್ಯದಲ್ಲೇ ತಂಡವನ್ನು ಗೆಲ್ಲಿಸಿದರು. ಸ್ವತಃ ಆಲ್‌ರೌಂಡರ್ ಆಟದಿಂದ ಮುನ್ನಡೆಸಿದ ಹಾರ್ದಿಕ್ ಪಾಂಡ್ಯ, ಬಾಲ್ ಮತ್ತು ಬ್ಯಾಟ್ ಎರಡರಲ್ಲೂ ಮಿಂಚಿದರು. ಭಾನುವಾರ ಮಲಾಹೈಡೆಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದರು ಮತ್ತು ಬ್ಯಾಟಿಂಗ್‌ನಲ್ಲಿ 12 ಎಸೆತಗಳಲ್ಲಿ 24 ರನ್ ಗಳಿಸಿ ಭಾರತ ಆರಾಮವಾಗಿ ಐರ್ಲೆಂಡ್ ತಂಡದ ವಿರುದ್ಧ ಗೆಲ್ಲಲು ಸಹಕಾರಿಯಾಯಿತು.