ನಾಯಕತ್ವ ಬದಲಾವಣೆ ಬೇಡ

0
266

ಸಿಎಂ ಬಿಎಸ್‍ವೈ ಬೆಂಬಲಿಸಿದ ಮಠಾಧೀಶರು

ಬಳ್ಳಾರಿ: ಸಿಎಂ ಬಿಎಸ್ ಯಡಿಯೂರಪ್ಪರವರನ್ನು ಬದಲಾಯಿಸಬಾರದು ಎಂದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಮಠಾಧೀಶರ ಧರ್ಮ ಪರಿಷತ್‍ನ ಸುಮಾರು 15 ಮಠಾಧೀಶರು ಬಿ.ಎಸ್.ವೈ ಬೆಂಬಲಕ್ಕೆ ನಿಂತಿದ್ದಾರೆ.ರಾಜ್ಯ ಆಡಳಿತಾರೂಢ ಪಕ್ಷ ಬಿಜೆಪಿಯಲ್ಲಿ ಬಣ ರಾಜಕೀಯ ಭುಗಿಲೆದ್ದಿದೆ. ನಾಯಕತ್ವ ಬದಲಾವಣೆಯ ಬದಲಾವಣೆಗೆ ಕೆಲವು ಶಾಸಕರು ಆಗ್ರಹಿಸುತ್ತಿದ್ದಾರೆ. ಆದರೇ ಸಿಎಂ ಬಿಎಸ್‍ವೈ ಉತ್ತಮ ಕಾರ್ಯ ಮಾಡುತ್ತಿದ್ದು ಅವರ ಬದಲಾವಣೆಯ ಅವಶ್ಯಕತೆಯಿಲ್ಲ ಎಂದು ನಗರದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ಧೇಶಿಸಿ ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮಿಗಳು ಹೇಳಿದರು.

ಕೊರೋನಾ ಮಹಾಮಾರಿ ಆವರಿಸಿರುವ ಸಂಕಷ್ಟದ ಸಂದರ್ಭದಲ್ಲಿಯೂ ಬಿಎಸ್ ಯಡಿಯೂರಪ್ಪನವರು ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ವರ್ಗಗಳಿಗೆ ಪರಿಹಾರದ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿಗಳು ಕೊರೋನಾ ನಿಯಂತ್ರಣ ಮಾಡುವಲ್ಲಿಯೂ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ.ಎಸ್.ಯಡಿಯೂರಪ್ಪನವರು ವೀರಶೈವ ಲಿಂಗಾಯತ ಸಮುದಾಯದ ಸಮರ್ಥ ನಾಯಕರಾಗದ್ದಾರೆ. ಕೋವಿಡ್ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಸರಿಯಲ್ಲ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದೆಂದು ಮಠಾಧೀಶರ ಧರ್ಮ ಪರಿಷತ್ ಸುಮಾರು 15 ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಾಮದೇವ ಶಿವಾಚಾರ್ಯ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮರಿಸಿದ್ದ ಮಹಾಸ್ವಾಮೀಜಿ, ಬಸವ ಭೂಷಣ ಮಹಾಸ್ವಾಮೀಜಿ, ಅಭಿನವ ಹಾಲಸ್ವಾಮಿಗಳು ಸಿಎಂ ಯಡಿಯೂರಪ್ಪನವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

Previous articleಕೋಕಾ-ಕೋಲಾ ಕ್ಕೆ ಒದ್ದ ರೊನಾಲ್ಡೋ, ಕಂಪನಿಗೆ ಭಾರೀ ನಷ್ಟ
Next article38ನೇ ವಾರ್ಡಿನಲ್ಲಿ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಸೋಮಶೇಖರ ರೆಡ್ಡಿ ಯಿಂದ ಚಾಲನೆ

LEAVE A REPLY

Please enter your comment!
Please enter your name here