ಚಿತ್ರದುರ್ಗ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬೇಕೆಂದರೆ ಪ್ರತಿಭೆಯ ಜೊತೆಗೆ ಆರ್ಥಿಕ ನೆರವು ಅತಿ ಮುಖ್ಯ ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಪತ್ರಕರ್ತರ ಭವದನದಲ್ಲಿ ಶನಿವಾರ ಸುದ್ದಿಗೋ ಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ಬೆಂಗಳೂರು, ಬಂಜಾರ ಎಜುಕೆ Ãಷನಲ್ ಅಕಾಡೆಮಿ ಟ್ರಸ್ಟ್, ಸಾಧನಾ ಕೋಚಿಂಗ್ ಸೆಂಟರ್ ಇವರುಗಳ ಸಹಯೋಗದೊಂದಿಗೆ ಅರ್ಹ ಬಂಜಾರ ವಿದ್ಯಾರ್ಥಿಗಳಿಗೆ ಕೆಎಎಸ್, ಮತ್ತು ಐಎಎಸ್ ಇತ್ಯಾದಿ ಗೆಜೆಟೆಡ್ ಹುದ್ದೆಗಳಿಗೆ ಬೆಂಗಳೂರಿನಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದು. ಕಳೆದ ವರ್ಷದಿಂದಲೂ ಕೊರೋನಾ ಮಹಾಮಾರಿ ಎಲ್ಲರನ್ನು ಕಾಡುತ್ತಿರುವುದರಿಂದ ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ವಲಸೆ ಹೋಗಿರುವ ಬಂಜಾರ ಜನಾಂಗದ ಮೇಲೆ ಅಲ್ಲಿನ ಶ್ರೀಮಂತರ ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಂಜಾರ ಜನಾಂಗಕ್ಕೆ ಆರ್ಥಿಕ ನೆರವು ನೀಡಿ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.