ಎರಡು ಸಾವಿರ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನೀಡುವ ಗುರಿ ಇದೆ

0
200

ಬಳ್ಳಾರಿ:ನಗರದ ಎಸ್.ಪಿ. ಸರ್ಕಲ್ ಹತ್ತಿರದ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿನ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ರೆಸ್ಕ್ಯೂ ಸೆಂಟರ್ ನಲ್ಲಿ ಮಹಾನಗರ ಪಾಲಿಕೆ ಹಾಗೂ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ ಸಹಯೋಗದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಆಂಟಿ ರಾಬೀಸ್ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೋತ್ ಅವರು ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಹಲವು ಬಾರಿ ಸಾರ್ವಜನಿಕರು ಬೀದಿನಾಯಿಗಳಿಂದ ತೊಂದರೆ ಅನುಭವಿಸಿ ಮಹಾನಗರ ಪಾಲಿಕೆಯ ಗಮನಕ್ಕೆ ಸಹ ತಂದಿದ್ದರು. ನಗರದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಶಸ್ತ್ರ ಚಿಕಿತ್ಸೆ ಮಾಡಲು ಮಹಾನಗರ ಪಾಲಿಕೆ ಹಲವು ಬಾರಿ ಟೆಂಡರ್ ಕೆರೆದರು ಯಾರು ಮುಂದೆ ಬರಲಿಲ್ಲ ಈಗ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆಯವರು ಮುಂದೆ ಬಂದಿದ್ದಾರೆ. ಸದ್ಯ ಎರಡು ಸಾವಿರ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಆಂಟಿ ರಾಬೀಸ್ ವ್ಯಾಕ್ಸಿನ್ ನೀಡುವ ಗುರಿ ಇದೆ ಎಂದರು. ಒಂದು ದಿನಕ್ಕೆ ಮೂವತ್ತು ಬೀದಿನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಲಸಿಕೆ ಸಹ ಹಾಕಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಹನುಮಂತಪ್ಪ, ಸಂಸ್ಥೆಯ ಸ್ಥಾಪಕಿ ಡಾ. ಬಿಂದು ರಾಣಿ ,ನಿಕಿತಾ, ಹರ್ಷ ಸೋನಿ ಇತರರು ಇದ್ದರು.

Previous articleರಾಘವಂಕ ಮಠದ ಉತ್ತರಾಧಿಕಾರಿ ನೇಮಕ ಕಾನೂನು ಭಾಹಿರ
Next articleಉದರನಿಮಿತ್ತಂ ಬಹುಕೃತ ವೇಷಂ

LEAVE A REPLY

Please enter your comment!
Please enter your name here