ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ರಾಜ್ಯದ ಮಕ್ಕಳ ತಜ್ಞರ ಸಣಘದ ಸಾಂಕ್ರಾಮಿಕ ರೋಗಗಳ ಅಂಗವು, ಬಳ್ಳಾರಿ ಮಕ್ಕಳ ತಜ್ಞರ ಸಂಘ, ವಿಜಯನಗರ ಮಕ್ಕಳ ತಜ್ಞರ ವಿಭಾಗ, ವೈಧ್ಯಕೀಯ ಸಂಸ್ಥೆ ಹಾಗೂ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞರ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಇದೇ. 25 ರಂದು ತೋರಣಗಲ್ಲು ಜಿಂದಾಲ್ ಸ್ಟೀಲ್ಸ್ ಸಂಭಾಗಣದಲ್ಲಿ
11ನೇ ವಾರ್ಷಿಕ ರಾಜ್ಯ ಸಾಂಕ್ರಾಮಿಕ ರೋಗಗಳ ಸಮ್ಮೇಳನ STEEL CITY IDCON 2022 ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟನಾ ಅಧ್ಯಕ್ಷರಾದ ಡಾ. ರವಿಶಂಕರ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಇರುವ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾಂಕ್ರಾಮಿಕ ರೋಗಗಳ, ಅಂಗವು ಸಾಂಕ್ರಾಮಿಕ ರೋಗಗಳ ಅಧ್ಯಯನವನ್ನು ಉತ್ತೇಜಿಸುವ ಉಪಸಮಿತಿಯಾಗಿದೆ. ಕಳೆದ ದಶಕದಲ್ಲಿ ಸಾಂಕ್ರಮಿಕ ರೋಗಗಳ ಚಿಕಿತ್ಸಾ ಕ್ರಮವು ಭಾರತದಲ್ಲಿ ವೇಗವಾಗಿ ಬೆಳೆಯುತ್ತದೆ. ಈ ವರ್ಷದ ಸಮ್ಮೇಳನದ ವಿಷಯವೆಂದರೆ ಮರುಕಳಿಸುವ ಸೋಂಕುಗಳು ಮತ್ತೆ ಪುನಃ ನೋಡಿ ಕಲಿಯುವುದು ಭಾರತದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಪರಿಣಿತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆಯಾದರೂ ಜನಸಂಖ್ಯೆಯ ಬೆಳವಣಿಗೆ, ವಲಸೆ ಮತ್ತು ಇತರ ಅಂಶಗಳಿAದ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಸವಾಲಿನದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನಾ ಅಧ್ಯಕ್ಷರಾದ ಡಾ. ಅಜಯ್ ಎಸ್ ಕೆ, ಡಾ. ಸುನೀಲ್ ಕುಮಾರ್ ಪಿ, ಡಾ. ರಾಘವೇಂದ್ರ ಭೂಪಾಲ್ ವೈ ಜೆ, ಡಾ. ದುರ್ಗಪ್ಪ ಹೆಚ್, ಡಾ. ಶ್ರೀಕಾಂತ್ ಬಿ ಕೆ, ಡಾ. ಸಂಜಯ್ ಸಜ್ಜನ್ ಹಾಜರಿದ್ದರು.