11.3 C
New York
Tuesday, March 28, 2023

Buy now

spot_img

“ರಾಜ್ಯದ ಆಡಳಿತ ಹಾಗೂ ಘನತೆಗೆ ಬಿಜೆಪಿ ಮಸಿ ಬಳದಿದೆ”: ಕಾಂಗ್ರೆಸ್ ಆರೋಪ

ಬೆಂಗಳೂರು: ನ್ಯಾಯಾಂಗವನ್ನೇ ಬೆದರಿಸುವ ಮಟ್ಟಿಗೆ ಭ್ರಷ್ಟರಿಗೆ ಬಿಜೆಪಿ ಸರ್ಕಾರ ಬಲ ಕೊಟ್ಟಿದೆ, ಸರ್ಕಾರದ ಬೆಂಬಲವಿಲ್ಲದೆ ಈ ಧೈರ್ಯ ಬರಲು ಅಸಾಧ್ಯ. ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಹಾಕಿರುವ ಪ್ರಕರಣ ಅತ್ಯಂತ ಗಂಭೀರವಾದುದು, ಈ ಪ್ರಕರಣದ ತನಿಖೆ ಆಗಬೇಕು. ೪೦% ಕಮಿಷನ್ನಿನ ಬಿಜೆಪಿ ಸರ್ಕಾರದಲ್ಲಿ ನ್ಯಾಯಾಂಗದ ಸ್ವತಂತ್ರ ಕಸಿಯುತ್ತಿರುವುದು ಸ್ಪಷ್ಟ.

ಪ್ರಸ್ತುತ ಬೆಳವಣಿಗೆಗಳಿಂದ ರಾಜ್ಯದ ಆಡಳಿತ ಹಾಗೂ ಘನತೆಗೆ ಮಸಿ ಬಳಿದಂತಾಗಿದೆ. ರಾಜ್ಯದಲ್ಲಿ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ನ್ಯಾಯಮೂರ್ತಿಗಳೇ ಈ ಬಗ್ಗೆ ದುಗುಡ ವ್ಯಕ್ತಪಡಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸರ್ಕಾರ ಏನು ಬಯಸಿದೆ ಎಂಬುದು ದಾಖಲೆಗಳಿಂದ ಜಗಜ್ಜಾಹೀರಾಗಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅವರ ಬಂಧನ ಕೇವಲ ನ್ಯಾಯಾಂಗ ಹಾಗೂ ಜನರ ಕಣ್ಣೊರೆಸುವ ತಂತ್ರ. ಈ ಪ್ರಕರಣದಲ್ಲಿ ೩೦೦ ರಿಂದ ೫೦೦ ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಇದೆಲ್ಲದರ ಸಂಪೂರ್ಣ ವಿಚಾರಣೆ ಮಾಡದೇ ಅವರನ್ನು ನೆಪಮಾತ್ರಕ್ಕೆ ಬಂಧಿಸಿ ವಿಚಾರಣೆ ಮುಕ್ತಾಯಗೊಳಿಸಲು ಮುಂದಾಗಿದ್ದಾರೆ ಎಂದು ಕಾಮಗೆಸ್ ಆರೋಪಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,749FollowersFollow
0SubscribersSubscribe
- Advertisement -spot_img

Latest Articles