ಬಳ್ಳಾರಿ : ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲೆಗಳಲ್ಲಿನ ಸುಮಾರು 222 ಪರೀಕ್ಷಾ ಕೇಂದ್ರಗಳಲ್ಲಿ 42 ಸಾವಿರದ 989 ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿ ಪರೀಕ್ಷೆ ಗೆ ಕೂಡಿಸಲಾಗಿದೆ ಹಾಗೂ ಪರೀಕ್ಷೆ ಬರೆಯ ಬರೆಯುತ್ತಿರುವ ಎಲ್ಲಾ ಮಕ್ಕಳಿಗೂ ಮಾಸ್ಕ್ ನೀಡಿ ಸ್ಯಾನಿಟೈಜ್ ಮಾಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ ಎಂದು ಡಿಡಿಪಿಐ ರಾಮಪ್ಪ ಅವರು ಹೇಳಿದರು.
ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸೋಮವಾರ ಮಾತನಾಡಿದ ಅವರು ಯಾವುದೇ ಆತಂಕ ವಿಲ್ಲದೇ ಹತ್ತನೇ ತರಗತಿ ಪರೀಕ್ಷೆಯನ್ನು ಹಬ್ಬದಂತೆ ಎದುರಿಸಲು ಈಗಾಗಲೆ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಅರಿವು ಮೂಡಿಸಲಾಗಿದೆ. ಪರೀಕ್ಷೆಯನ್ನು ಸೂಸೂತ್ರವಾಗಿ ಎದುರಿಸಲು ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸೇರಿದಂತೆ
ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರದೊಂದಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ರಾಮಪ್ಪ ಅವರು ಪ್ರತಿಪಾಧಿಸಿದರು.
ಪ್ರತ್ಯೇಕ ಆಸನ ವ್ಯವಸ್ಥೆ: ಕೆಮ್ಮು, ಜ್ವರ, ನೆಗಡಿ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಸಹ ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆ ಹೇಗೆ ಎದುರಿಸಬೇಕು: ಈ ವರ್ಷದ ಪರೀಕ್ಷೆ ಪ್ಯಾಟ್ರನ್ ಚೇಂಜ್ ಆಗಿದ್ದು ಒಂದು ಒಎಂಆರ್ ಷೀಟ್ ನೀಡಿಲಾಗಿದ್ದು ಮೂರು ವಿಷಯಗಳ ಪ್ರಶ್ನೇ ಪತ್ರಿಕೆ ನೀಡಲಾಗಿದೆ ಅದರಂತೆ ವಿಧ್ಯಾರ್ಥಿ ಗಳು ಪರೀಕ್ಷೆಯನ್ನು ಬರೆಯಬೇಕಾಗಿದೆ ಈಗಾಗಲೇ ಪರೀಕ್ಷೆ ಹೇಗೆ ಎದುರಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪೊಷಕರಿಗೆ ಸಹ ಮಾಹಿತಿ ನೀಡಲಾಗಿದೆ ಎಂದರು.
ಸೋಂಕು ಇರುವ ವಿದ್ಯಾರ್ಥಿ: ಬಳ್ಳಾರಿಯ ಜಿಲ್ಲೆಯ ಕುರುಗೋಡು ಪರೀಕ್ಷಾ ಕೇಂದ್ರದಲ್ಲಿ ಒಬ್ಬ ಸೋಂಕು ಇರುವ ವಿದ್ಯಾರ್ಥಿ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದು ಆ ವಿದ್ಯಾರ್ಥಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಿಬ್ಬಂದಿ ಸೇರಿದಂತೆ ಇತರರು ಇದ್ದರು