ಸಕಲ ಸಿದ್ದತೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 32 ವಿದ್ಯಾರ್ಥಿಗಳ ಗೈರು

0
185

ಸಿರುಗುಪ್ಪ: ತಾಲೂಕಿನೆಲ್ಲೆಡೆ 19ರಂದು ನಡೆದ 26 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಮಾಜಶಾಸ್ತç, ಅರ್ಥಶಾಸ್ತç, ರಾಜ್ಯಶಾಸ್ತç ವಿಷಯಗಳ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಸಕಲ ಸಿದ್ಧತೆಯಲ್ಲಿ ನಡೆಯಿತು.
ಬೆಳಿಗ್ಗೆ 10:15 ಕ್ಕೆ ಪ್ರಾರಂಭವಾಗಿ 1:30ಕ್ಕೆ ಮುಕ್ತಾಯಗೊಂಡಿತು. ಸಮಾಜಶಾಸ್ತç ಮತ್ತು ಅರ್ಥಶಾಸ್ತç ವಿಷಯಗಳಿಗೆ 32 ವಿದ್ಯಾರ್ಥಿಗಳು, ರಾಜ್ಯಶಾಸ್ತçಕ್ಕೆ 34 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ. ಭಜಂತ್ರಿ ತಿಳಿಸಿದರು.
ಕೋವಿಡ್-19 ಮಾರ್ಗಸೂಚಿಯಂತೆ ದೈಹಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಜಿಂಗ್ ಸೇರಿದಂತೆ ಎಲ್ಲಾ ಮಕ್ಕಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯಿAದ ಥರ್ಮಲ್ ಸ್ಕಾö್ಯನಿಂಗ್ ಮೂಲಕ ತಪಾಸಣೆ ನಡೆಸಿ ಪರೀಕ್ಷಾ ಕೆಂದ್ರಗಳಿಗೆ ಹೋಗಲು ಅನುಮತಿಸಲಾಯಿತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅನಾರೋಗ್ಯ ಮತ್ತು ಕೋವಿಡ್ ಪಾಸಿಟಿವ್ ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದ್ದು ಅಂತಹ ಯಾವುದೇ ಪ್ರಕರಣಗಳು ಕಂಡುಬAದಿಲ್ಲ, ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕಡಿಮೆಯಾಗುತ್ತಿದ್ದು, ಮೂರನೇ ಅಲೆ ಸೋಂಕು ವಿದ್ಯಾರ್ಥಿಗಳಿಗೆ ಹರಡದಂತೆ ಎಚ್ಚರವಹಿಸಿ ಪರೀಕ್ಷೆ ನಡೆಯುವ ಪ್ರದೇಶದ ಸುತ್ತ 144 ಸೆಕ್ಸ್ನ ಜಾರಿಗೊಳಿಸಿದ್ದು, ಸರ್ಕಾರದ ಆದೇಶದ ಅನ್ವಯ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಪರೀಕ್ಷೆಗಳು ನಡೆಸಲಾಯಿತು.
ಯಾವುದೇ ಅಡ್ಡಿ ಆಂತಕಗಳಿಲ್ಲದAತೆ ಪರೀಕ್ಷೆ ನಡೆಸಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಲಾಗುತ್ತಿದೆಂದು ಮಾಹಿತಿ ನೀಡಿದ

Previous articleಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರಲ್ಲಿ ಹೆಚ್ಚಿನವರು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ..
Next articleಆಗಸ್ಟ್15ರೊಳಗೆ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ನೀರು

LEAVE A REPLY

Please enter your comment!
Please enter your name here