ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಕಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮೈಯಿನವರನ್ನ ಆಯ್ಕೆ ಮಾಡಲಾಗಿದೆ. ಈ ನೂತನ ಸಚಿವ ಸಂಪುಟದಲ್ಲಿ ಬಳ್ಳಾರಿಯ ಶ್ರೀರಾಮುಲು ರವರಿಗೆ ಡಿಸಿಎಂ ಸ್ಥಾನ ಹಾಗೂ ನಗರದ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ ರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸರ್ಕಾರಕ್ಕೆ ಭಾರತೀಯ ಜನತಾ ಪಾರ್ಟಿ ಬಳ್ಳಾರಿ ನಗರ ಅಧ್ಯಕ್ಷರಾದ ಕೆ.ಬಿ.ವೆಂಕಟೇಶ್ವರ ಒತ್ತಾಯಿಸಿದರು.
ಸೋಮವಾರ ನಗರದ ಎಸ್ಪಿ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಸೋಮಶೇಖರ್ ರೆಡ್ಡಿ ರವರು 1999ರಲ್ಲಿ ಪಕ್ಷಕ್ಕೆ ಸೇರಿದರು ನಂತರ 2001ರಲ್ಲಿ ಬಳ್ಳಾರಿ ನಗರಸಭೆ ಸದಸ್ಯರಾಗಿ, 2004ರಲ್ಲಿ ಮಹಾನಗರಪಾಲಿಕೆಯ ಮಹಾ ಪೌರರಾಗಿ ಪ್ರಥಮವಾಗಿ ಆಯ್ಕೆಯಾಗಿದ್ದಾರೆ. ಹಾಗೂ 2008ರಲ್ಲಿ ಬಳ್ಳಾರಿ ನಗರದ ಶಾಸಕರಾಗಿ ಆಯ್ಕೆಯಾಗಿ ನಗರಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಶ್ರೀ ರಾಮುಲು ರವರು ಅತಿ ಚಾತುರ್ಯ ದಿಂತ ತಮಗೆ ನೀಡಿದ ಖಾತೆಯನ್ನು ಉತ್ತಮ ರೀತಿಯ ನಿಭಾಯಿಸಿದ್ದಾರೆ ಹಾಗಾಗಿ ಶ್ರೀರಾಮುಲು ರವರಿಗೆ ಡಿಸಿಎಂ ಸ್ಥಾನ ನೀಡಲು ಮನವಿ ಮಾಡುತ್ತೆವೆ ಎಂದರು.
ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿಗಳಾದ ರಾಮಾಂಜಿನಿ ಹಾಗೂ ಪಾಲಿಕೆ ಸದಸ್ಯರುಗಳು ಕೆ.ಎಸ್.ಅಶೋಕ್ ಕುಮಾರ್, ಸುರೇಂದ್ರ, ಹನುಮಂತ ಗುಡಿ ಗಂಟಿ, ನಗರದ ಘಟಕದ ಪ್ರಹ್ಲಾದ್ , ಕೆದರ್ ಸ್ವಾಮೀ, ಪುಷ್ಪ ಲತಾ, ಲಕ್ಷ್ಮಿ ದೇವಿ, ರೈತ ಮೋರ್ಚಾ ನಗರ ಅಧ್ಯಕ್ಷರು ಸತ್ಯನಾರಾಯಣ, ಓ.ಬಿ.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುಂಡೇಕರ್ ರಾಜೇಶ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷರು ಜ್ಯೋತಿಪ್ರಕಾಶ್ ಎಸ್ ಸಿ ಮೋರ್ಚಾ ನಗರ ಅಧ್ಯಕ್ಷರು ರಾಜೇಶ್ ಎಸ್ ಟಿ ಮೋರ್ಚಾ ನಗರ ಅಧ್ಯಕ್ಷರು ರಾಣಿತೋಟ ವೀರೇಶ್ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಜೀ. ಓಂ ಪ್ರಕಾಶ್ ಮೈನಾರಿಟಿ ಮೋರ್ಚಾ ನಗರ ಅಧ್ಯಕ್ಷರು ಫಿರೋಜ್ ಹಾಗೂ ಮಾದ್ಯಮ ಸಂಚಾಲಕ ರಾಜೀವ್ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು….