ಭಾರತ ಗೆಲ್ಲಲು ಕಾರಣವಾದ ಸಂಗತಿ ಹೇಳಿದ ಇಂಗ್ಲೆಂಡ್ ನಾಯಕ ಜೋ ರೂಟ್

0
159

ಓವಲ್‌ನಲ್ಲಿ ಟೀಮ್ ಇಂಡಿಯಾ ಅಮೋಘ 157 ರನ್‌ಗಳ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆಯ ಹೊರತಾಗಿಯೂ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಆದರೆ ಈ ಪಂದ್ಯವನ್ನು ಟೀಮ್ ಇಂಡಿಯಾ ಇಂಗ್ಲೆಂಡ್ ಕೈಯಿಂದ ಕಸಿದುಕೊಂಡಿದ್ದು ಎಲ್ಲಿ ಎಂಬುದನ್ನು ಸ್ವತಃ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿವರಿಸಿದ್ದಾರೆ. ಟೀಮ್ ಇಂಡಿಯಾ ಗೆಲ್ಲು ಕಾರಣವಾದ ಸಂಗತಿಯನ್ನು ರೂಟ್ ವಿವರಿಸಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು ವೇಗಿಗಳು ನೀಡಿದ ಪ್ರದರ್ಶನ ಬಹಳ ಪ್ರಮುಖ ಪಾತ್ರವಹಿಸಿತು ಎಂದಿದ್ದಾರೆ ಜೋ ರೂಟ್. ಅದರಲ್ಲೂ ಭಾರತೀಯ ವೇಗಿಗಳು ರಿವರ್ಸ್ವಿಂಗ್ ಎಸೆತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿದ್ದು ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತು.

ಈ ಮೂಲಕ ಭಾರತ ಇಂಗ್ಲೆಂಡ್ ತಂಡವನ್ನು ಐದನೇ ದಿನದಾಟದಲ್ಲಿ ಮೀರಿಸಿತು ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್. ಟೀಮ್ ಇಮಡಿಯಾ ನೀಡಿದ್ದ 368 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 77 ರನ್‌ಗಳಿಸಿತ್ತು. ಐದನೇ ದಿನ ಮೊದಲ ಸೆಶನ್‌ನಲ್ಲಿ ಭಾರತದ ವೇಗಿ ಶಾರ್ದೂಲ್ ಠಾಕೂರ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದರು. 100 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ ಬಳಿಕ ಹಠಾತ್ ಕುಸಿತ ಕಾಣಲು ಆರಂಭಿಸಿತ್ತು. ಬಳಿಕ 210 ರನ್‌ಗಳಾಗುವಷ್ಟರಲ್ಲಿ ತಂಡ ಆಲೌಟ್ ಆಗಿತ್ತು. ಈ ಮೂಲಕ ಇಂಗ್ಲೆಂಡ್ ಮತ್ತೊಂದು ಭಾರೀ ಅಂತರದ ಸೋಲು ಕಂಡಿದೆ. ಆರಂಭಿಕರ ಪ್ರದರ್ಶನದ ನಂತರ ನಾಯಕ ಜೋ ರೂಟ್ ಇಂಗ್ಲೆಂಡ್ ತಂಡವನ್ನು ಮೇಲೆತ್ತುವ ಪ್ರಯತ್ನವನ್ನು ನಡೆಸಿದರು.

ಆದರೆ ಭಾರತದ ಬೌಲಿಂಗ್ ದಾಳಿಯ ಮುಂದೆ ಅದು ಸಾಧ್ಯವಾಗಲಿಲ್ಲ. ಟೀಮ್ ಇಮಡಿಯಶದ ವೇಗಿ ಉಮೇಶ್ ಯಾದವ್ 60 ರನ್‌ಗಳನ್ನು ನೀಡಿ 3 ವಿಕೆಟ್ ಪಡೆದರೆ ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಬಳಿಸಿದರು. “ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ್ದಕ್ಕೆ ಹತಾಶರಾಗಿದ್ದೇವೆ. ನಾವು ಗೆಲ್ಲುವ ಅವಕಾಶವಿದೆ ಎಂದು ಭಾವಿಸಿದ್ದೆವು. ಆದರೆ ಇದೆ ಶ್ರೇಯಸ್ಸು ಭಾರತಕ್ಕೆ ಸಲ್ಲಬೇಕು. ಅವರರು ಚೆಂಡನ್ನು ರಿವರ್ಸ್ ಮಾಡುವಲ್ಲಿ ಯಶಸ್ವಿಯಾದರು. ಅದು ಪಂದ್ಯಕ್ಕೆ ತಿರುವು ನೀಡಿತು” ಎಂದಿದ್ದಾರೆ ಜೋ ರೂಟ್. “ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಹೆಚ್ಚಿನ ಲೀಡ್ ಪಡೆಯಬೇಕಾಗಿತ್ತು.

ವಿಶ್ವ ದರ್ಜೆಯ ಆಟಗಾರರ ಮುಂದೆ ನೀವು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಉತ್ತಮ ದಾರಿಯನ್ನು ಕಂಡುಕೊಳ್ಳಬೇಕು. ಆದರೆ ವಾಸ್ತವದ ಅರಿವಿರಬೇಕು. ಎದರಾಳಿ ವಿಶ್ವದರ್ಜೆಯ ಬೌಲಿಂಗ್ ಸಾಮರ್ಥ್ಯವನ್ನು ಹೊಂದಿದೆ ಎಂಬುದರ ಬಗ್ಗೆ ಅರಿವಿರಬೇಕು” ಎಂದಿದ್ದಾರೆ ಜೋ ರೂಟ್. ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್. ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜಾನಿ ಬೈರ್‌ಸ್ಟೊವ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.

Previous articleಓವಲ್ ಟೆಸ್ಟ್: ಪಂದ್ಯದ ವೇಳೆ ಕೊಹ್ಲಿಗೆ ಬೂಮ್ರಾ ನೀಡಿದ ಈ ಉಪಾಯ 2 ಪ್ರಮುಖ ವಿಕೆಟ್ ಬೀಳಿಸಿದವು!
Next articleಸರಳವಾಗಿ ಗಣೇಶೋತ್ಸವ ಆಚರಿಸಿ

LEAVE A REPLY

Please enter your comment!
Please enter your name here