ಲಡಾಕ್: ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಎಲ್ಲೆಡೆ ಜನರು ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರು ಕೂಡ ಯೋಗಾಭ್ಯಾಸ ಮಾಡಿದ್ದು, ಅವರ ಯೋಗ ಪ್ರದರ್ಶನದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‍ನ ಹಿಮವೀರರು ಕೂಡ ಶೂನ್ಯ ತಾಪಮಾನದ ಲಡಾಖ್ ನಲ್ಲಿ ಯೋಗಾಭ್ಯಾಸ ಮಾಡಿದ್ದಾರೆ.
ಯೋಗವೇ ರಕ್ಷಾಕವಚ! ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‍ನ ಈ ಹಿಮವೀರರಿಗೆ ಲಡಾಖ್ ನಲ್ಲಿನ ಹವಾಮಾನವು ಪ್ರತಿಬಂಧಕವಾಗಿಲ್ಲ ಏಕೆಂದರೆ ಅವರು ಅಂತರರಾಷ್ಟ್ರೀಯ ಯೋಗ ದಿನವನ್ನು ಹೆಮ್ಮೆಯಿಂದ ಆಚರಿಸುತ್ತಿದ್ದಾರೆ ಎಂದು ವಾಣಿಜ್ಯ ಸಚಿವ ಪಿಯೂμï ಗೋಯಲ್ ಹೇಳಿದ್ದಾರೆ.