ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕು ಭಾರೀ ಆತಂಕವನ್ನ ಸೃಷ್ಠಿಸಿದೆ. ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಂದಾಜು 180 ಮಂದಿ ಯುವಜನರು ಸಿಂಗಲ್ ಪೇರೆಂಟ್ ಅನ್ನ ಹೊಂದಿದ್ದಾರೆ.
ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ತಂದೆ ಅಥವಾ ತಾಯಿಯಂದಿರು ಮಹಾಮಾರಿ ಈ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದ ರಿಂದ 180 ಮಂದಿ ಯುವಜನರು ಸೇರಿದಂತೆ ಚಿಣ್ಣರು ಕೂಡ ಅನಾಥವಾಗಿದ್ದಾರೆ.
ಇಂಥಹ ಅನಾಥ ಮಕ್ಕಳನ್ನ ಗುರುತಿಸಿದ್ದ ಲ್ಲದೇ ಅವರಿಗೆ ನೆರವಾಗೋ ಕಾರ್ಯಕ್ಕೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿರೋದು ಇದೀಗ ಶ್ಲಾಘ ನಾರ್ಹ.ಸಿಂಗಲ್ ಪೇರೆಂಟ್ ಹೊಂದಿರುವ ಈ ಯುವಜನರ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ 180 ಮಂದಿ ಯುವಜನರನ್ನ ಗುರುತಿಸಿದೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯುವಜನರ ಹಾಗೂ ಮಕ್ಕಳ ಚೈತನ್ಯ ಕಾರ್ಯಕ್ಕೆ ಪುಷ್ಠಿ ನೀಡೋ ಯೋಜನೆಯನ್ನ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಯು.ನಾಗರಾಜ ಮಾತನಾಡಿ, ಕೊರೊನಾ ಸೋಂಕಿನಿಂದ ಮೃತಪಟ್ಟು ಸಿಂಗಲ್ ಪೇರೆಂಟ್ ಅನ್ನ ಹೊಂದಿರುವ ಅನಾಥ ಮಕ್ಕಳ ಹಾಗೂ ಯುವಜನರ ನೆರವಿಗೆ ಮುಂದಾಗಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಯನ್ನ ಅನು ಷ್ಠಾನಗೊಳಿಸಲು ಇಲಾಖೆ ಸನ್ನದ್ಧವಾಗಿದೆ ಎಂದ್ರು ಡಿಡಿ ನಾಗರಾಜ.