ಸೈಮಾ ಪ್ರಶಸ್ತಿ ಪ್ರತೀ ವರ್ಷವೂ ನಡೆಯುತ್ತದೆ. ಸೌತ್ ಸಿನಿಮಾರಂಗದಲ್ಲಿ ಬಂದ ಸಿನಿಮಾಗಳಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಸೈಮಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಹಾಗಾಗಿ ಸೈಮಾ ಪ್ರಶಸ್ತಿಯ ಪಟ್ಟಿ ರಿವೀಲ್ ಆಗುವ ಸಮಯದಲ್ಲಿ ಸಾಕಷ್ಟು ಕುತೂಹಲಗಳು ಇರುತ್ತವೆ.
ಈಗ 2022ರ ಸೈಮಾ ಪಟ್ಟಿ ಹೊರ ಬರುತ್ತಿದೆ. ಈಗಾಗಲೇ ಸೈಮಾಗೆ ನಾಮಿನೇಟ್ ಆಗಿರುವ ಪ್ರಶಸ್ತಿಗಳ ಪಟ್ಟಿ ಕೂಡ ರಿವೀಲ್ ಆಗುತ್ತಿದೆ. ಸೌತ್ ಚಿತ್ರರಂಗಗಳಲ್ಲಿ ಬಂದಿರುವ ಹಲವು ಸಿನಿಮಾಗಳು ಮತ್ತು ಕಲಾವಿದರ ನಾಮಿನೇಷನ್ ಪಟ್ಟಿ ಬಿಡುಗಡೆಯಾಗಿದೆ.
ಸದ್ಯ ಕನ್ನಡದ ನಟಿಯರ ಪಟ್ಟಿ ಹೊರಬಂದಿದೆ. ಕನ್ನಡದ ಟಾಪ್ ನಟಿಯರ ಹೆಸರು ಈ ಬಾರಿ ಸೈಮಾಗೆ ನಾಮಿನೇಟ್ ಆಗಿದೆ. ಈ ಬಾರಿ ಸೈಮಾ ಪ್ರಶಸ್ತಿಯನ್ನು ಬಾಕಿಕೊಳ್ಳಲು, ಯಾವೆಲ್ಲಾ ನಟಿಯರು ರೇಸ್‌ನಲ್ಲಿ ಇದ್ದಾರೆ. ನಾಮಿನೇಟ್ ಆದವರು ಯಾರು ಎನ್ನುವ ಪಟ್ಟಿ ಇಲ್ಲಿದೆ.
‘ಸೈಮಾ’ಗೆ ಕನ್ನಡದಿಂದ ರಶ್ಮಿಕಾ ಮಂದಣ್ಣ!
ಈ ಬಾರಿಯ ಸೈಮಾ ಪ್ರಶಸ್ತಿಗೆ ನಟಿ ರಶ್ಮಿಕಾ ಮಂದಣ್ಣ ಹೆಸರು ನಾಮಿನೇಟ್ ಆಗಿದೆ. ವಿಶೇಷ ಎಂದರೆ ಆಕೆಯ ಹೆಸರು ನಾಮಿನೇಟ್ ಆಗಿರುವುದು ಕನ್ನಡದ ಚಿತ್ರಕ್ಕಾಗಿ. ರಶ್ಮಿಕಾ ಮಂದಣ್ಣ ನಟನೆಯ ಕನ್ನಡದ ಕೊನೆಯ ಸಿನಿಮಾ ‘ಪೊಗರು’ ಚಿತ್ರಕ್ಕಾಗಿ ಅವ್ರ ಹೆಸರು ನಾಮಿನೇಟ್ ಆಗಿದೆ. ಕನ್ನಡದ ಟಾಪ್ ನಟಿಯರಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಇದೆ. ಸೈಮಾ ಪ್ರಶಸ್ತಿಯ ರೇಸ್‌ನಲ್ಲಿ ರಶ್ಮಿಕಾ ಮಂದಣ್ಣ ಹೆಸರೂ ಇದೆ.
‘ಸೈಮಾ’ಗೆ ರಚಿತಾ ರಾಮ್ ನಾಮಿನೇಟ್!
ಕನ್ನಡದ ಹೆಸರಾಂತ ನಟಿ ರಚಿತಾ ರಾಮ್ ಹೆಸರೂ ಕೂಡ, ಸೈಮಾ ಪ್ರಶಸ್ತಿಗೆ ಭಾಜವಾಗಿದೆ. ಸೈಮಾ 2022ರ ಪ್ರಶಸ್ತಿಗೆ ರಚಿತಾ ರಾಮ್ ಹೆಸರು ನಾಮಿನೇಟ್ ಆಗಿದೆ. ಅಧಿಕೃತ ಪಟ್ಟಿಯಲ್ಲಿ ರಚ್ಚು ಹೆಸರು ಸೇರಿಕೊಂಡಿದೆ. ರಚಿತಾ ರಾಮ್ ಅಭಿನಯದ ‘ಲವ್ ಯು ರಚ್ಚು’ ಸಿನಿಮಾಗಾಗಿ ರಚಿತಾ ರಾಮ್ ಹೆಸರು ನಾಮಿನೇಟ್ ಆಗಿದೆ. ‘ಲವ್ ಯು ರಚ್ಚು’ ಸಿನಿಮಾದಲ್ಲಿ ರಚಿತಾ ರಾಮ್ ವಿಭಿನ್ನ ಪಾತ್ರ ಮಾಡಿದ್ದರು. ಈ ಸಿನಿಮಾ 2021ರಲ್ಲಿ ತೆರೆಗೆ ಬಂದಿತ್ತು.
ಸೈಮಾ ರೇಸ್‌ನಲ್ಲಿ ಆಶಿಕಾ ರಂನಾಥ್!
ನಟಿ ಆಶಿಕಾ ರಂಗನಾಥ್ ಹೆಸರು ಕೂಡ ಈ ಬಾರಿಯ ಸೈಮಾ ಅವಾರ್ಡ್‌ಗೆ ಭಾಜನರಾಗಿದೆ. ಉತ್ತಮ ನಾಯಕಿಯರ ಪಟ್ಟಿಯಲ್ಲಿ ನಟಿ ಆಶಿಕಾ ರಂಗನಾಥ್ ಹೆಸರು ಬಂದಿದೆ. ‘ಮದಗಜ’ ಚಿತ್ರಕ್ಕಾಗಿ ಆಶಿಕಾ ಹೆಸರು ನಾಮಿನೇಟ್ ಆಗಿದೆ. ಈ ಚಿತ್ರಲ್ಲಿ ಆಶಿಕಾ ರಂಗನಾಥ್ ಅಪ್ಪಟ್ಟ ಹಳ್ಳಿ ಹುಡುಗಿಯಂತೆ, ಲಂಗಾ ದಾವಣಿ ತೊಟ್ಟು ಮಿಂಚಿದ್ದಾರೆ.
ನಿಶ್ವಿಕಾ ನಾಯ್ಡು, ಅಮೃತಾ ಅಯ್ಯರ್ ನಾಮಿನೇಟ್!
ಕನ್ನಡದ ಒಟ್ಟು 5 ನಾಯಕ ನಟಿಯರ ಹೆಸರು ಸೈಮಾಗೆ ನಾಮಿನೇಟ್ ಆಗಿದೆ. ನಟಿ ಅಮೃತಾ ಅಯ್ಯಂಗಾರ್ ಮತ್ತು ನಿಶ್ವಿಕಾ ನಾಯ್ಡು ಹೆಸರು ಕೂಡ ನಾಮಿನೇಟ್ ಆಗಿದೆ. ನಟಿ ಅಮೃತಾ ಅಯ್ಯಂಗಾರ್ ‘ಬಡವಾ ರಾಸ್ಕಲ್’ ಚಿತ್ರಕ್ಕಾಗಿ ನಾಮಿನೇಟ್ ಆದರೆ, ನಿಶ್ವಿಕಾ ನಾಯ್ಡು ‘ಸಕ್ಕತ್’ ಸಿನಿಮಾದ ಪಾತ್ರಕ್ಕಾಗಿ ನಾಮಿನೇಟ್ ಆಗಿದ್ದಾರೆ. ಈ 5 ಮಂದಿಯಲ್ಲಿ ಯಾರು ಪ್ರಶಸ್ತಿಯ ಗರಿ ಮುಡಿಗೇರಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ.