ಬೆಳಗಾಯಿತು ವಾರ್ತೆ
ಬಳ್ಳಾರಿ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ನಲ್ಲಚೆರುವು ಪ್ರದೇಶದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ವೇದಿಕೆ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯಡು ಅವರು ದೀಪಾ ಬೆಳಗುವುದರ ಮೂಲಕ ಉದ್ಘಾಟಿಸಿ ನಾಡಿನ ಜನತೆಗೆ ವಾಲ್ಮೀಕಿ ಜಯಂತಿಯ ಶುಭಾಶಯ ಕೋರಿದರು.
ಈ ಸಂದರ್ಬದಲ್ಲಿ ಗ್ರಾಮಾಂತರ ಶಾಸಕರಾದ ಬಿ ನಾಗೇಂದ್ರ. ಅಪಾರ ಜಿಲ್ಲಾಧಿಕಾರಿ ಪಿ ಎಸ್ ಮಂಜುನಾಥ್. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಪಾಲಿಕೆ ಸದಸ್ಯರು. ಸಮುದಾಯದ ಮುಖಂಡರು. ಸೇರಿದಂತೆ ಇತರರು ಇದ್ದರು.