ಮುಂಬೈ: ರಾಷ್ಟçಪತಿ ಚುನಾವಣೆಯಲ್ಲಿ ಯಾರನ್ನ ಬೆಂಬಲಿಸಬೇಕೆAಬ ವಿಚಾರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತನ್ನ ಸಂಸದರ ಬೇಡಿಕೆಗೆ ಮಣಿದಿದೆ . ಜುಲೈ ೧೮ ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವಸೇನೆ ಬೆಂಬಲಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ೨೨ ಸಂಸದರಲ್ಲಿ ೧೬ ಮಂದಿ ಉದ್ಧವ್ ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ ಒಂದು ದಿನದ ನಂತರ ದ್ರೌಪತಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರವು ಹೊರಬಿದ್ದಿದೆ. ಸಭೆಯಲ್ಲಿ ಬಹುತೇಕರು ಮುರ್ಮು ಬುಡಕಟ್ಟು ಸಮುದಾಯದ ಮಹಿಳೆಯಾಗಿರುವುದರಿಂದ ಅವರಿಗೆ ಮತ ಹಾಕಬೇಕೆಂದು ಹೇಳಿದ್ದರು.
ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಜಂಟಿ ಅಭ್ಯರ್ಥಿ ಎಂದು ಪ್ರತಿಪಕ್ಷವು ಘೋಷಿಸಿದೆ. ಆದರೂ ಹಲವಾರು ಎನ್‌ಡಿಎಯೇತರ ಪಕ್ಷಗಳು ದ್ರೌಪತಿ ಮುರ್ಮು ಅವರ ಬುಡಕಟ್ಟು ಗುರುತನ್ನು ಉಲ್ಲೇಖಿಸಿ ಅವರನ್ನು ಬೆಂಬಲಿಸಲು ಆಯ್ಕೆ ಮಾಡಿಕೊಂಡಿವೆ.