ಸಿರುಗುಪ್ಪ: ತಲೆತಲಾಂತರದಿಂದ ಗೋಸಾಕಾಣಿಕೆಯನ್ನು ಕುಲಕಸುಬಾಗಿಸಿಕೊಂಡು ಗೋವುಗಳ ಸಂರಕ್ಷಣೆಯ ಜೊತೆಗೆ ಕುರಿಗಳ ಲಾಲನೆ ಪಾಲನೆಯೊಂದಿಗೆ ಹಸುಗಳ ಹಸಿವು ನಿವಾರಣೆಗಾಗಿ ಹಸಿರನ್ನು ಹುಡುಕಿಕೊಂಡು ಬೆಳೆ ಕಟಾವು ಮಾಡಿದ ರೈತರ ಹೊಲಗಳನ್ನೇ ದನದ ತೊಟ್ಟಿಯಾಗಿಸಿಕೊಂಡು ವರ್ಷದಲ್ಲಿ ಹತ್ತು ತಿಂಗಳುಗಳ ಕಾಲ ಅಲೆಯುವ ಕುಟುಂಬಗಳು ಇಂದಿಗೂ ಕಾಣಸಿಗುತ್ತವೆ.
ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಗೋವುಗಳ ಮತ್ತು ಕುರಿಗಳನ್ನು ಮೇಯಿಸುವುದಕ್ಕಾಗಿ ಬಂದ ಕೊಪ್ಪಳ ಜಿಲ್ಲೆಯ ಕನಕಗಿರಿಯ ಗೊಲ್ಲ ಸಮುದಾಯದ ಮೂರು ಕುಟುಂಬಗಳು 100ಕ್ಕೂ ಹೆಚ್ಚು ಕುರಿಗಳು ಹಾಗೂ 150ಕ್ಕೂ ಹೆಚ್ಚು ಹಸುಗಳ ಪಾಲನೆಯಲ್ಲೇ ಜೀವನ ಸಾಗಿಸುತ್ತಿವೆ. ಮಳೆಗಾಲದಲ್ಲಿ ಅಗಷ್ಟ್, ಸೆಪ್ಟಂಬರ್ ತಿಂಗಳಲ್ಲಿ ಮಾತ್ರ ಸ್ವಗ್ರಾಮದಲ್ಲಿ ಮೇಯಿಸುವುದು ನಂತರ ಸಂಬದಿಕರಲ್ಲೇ ಮೂರು ನಾಲ್ಕು ಕುಟುಂಬಗಳು ಒಟ್ಟುಗೂಡಿ ಸುತ್ತಮುತ್ತಲಿನ ಜಿಲ್ಲೆಗಳಾದ ಬಳ್ಳಾರಿ ರಾಯಚೂರು ಹಾಗೂ ನೆರೆಯ ಆಂದ್ರಪ್ರದೇಶದ ಕೆ¯ ಗ್ರಾಮಗಳಲ್ಲಿ ತುಂಗಾಭದ್ರ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆಯುವ ಭತ್ತದ ಕಟಾವಿನ ನಂತರ ಗದ್ದೆಗಳಲ್ಲಿ ಮೇಯಿಸುವುದಕ್ಕಾಗಿ ವಲಸೆ ಬಂದು ರೈತರ ಜಮೀನುಗಳಲ್ಲಿ ಕೂಡಿಹಾಕಿ ಹಸುಗಳ ಮೂತ್ರ ಮತ್ತು ಸೆಗಣಿಯು ರೈತರು ಜಮೀನುಗಳಲ್ಲಿ ಉತ್ತಮ ಸಾವಯುವ ಗೊಬ್ಬರವಾಗಿ ಮಾರ್ಪಾಡುಗುವುದರಿಂದ ರೈತರು ನೀಡುವ ಅಲ್ಪ ಹಣ ಅಥವಾ ಅಕ್ಕಿಯೇ ಇವರ ಜೀವನಾಧಾರವಾಗಿದೆ.