ಮುಂಬೈ: ಶಪೂರ್ಜಿ ಪಲ್ಲೊಂಜಿ (ಎಸ್‌ಪಿ) ಗ್ರೂಪ್‌ನ ಅಧ್ಯಕ್ಷ ಬಿಲಿಯನೇರ್ ಪಲ್ಲೊಂಜಿ ಮಿಸ್ತಿç ಅವರು ಮಂಗಳವಾರ ನಸುಕಿನಲ್ಲಿ ನಿಧನರಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಿಸ್ತಿç ಅವರ ಎಸ್‌ಪಿ ಗ್ರೂಪ್ ಟಾಟಾ ಗ್ರೂಪ್‌ನಲ್ಲಿ ೧೮.೩೭ ಪರ್ಸೆಂಟ್ ಹಿಡುವಳಿಯೊಂದಿಗೆ ೯೩ ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಷೇರುದಾರರಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪಲ್ಲೊಂಜಿ ಮಿಸ್ತಿç ವಾಣಿಜ್ಯ ಮತ್ತು ಉದ್ಯಮದ ಜಗತ್ತಿಗೆ ಕೊಡುಗೆಗಳನ್ನು ನೀಡಿದ್ದಾರೆ, ಕೋಟ್ಯಾಧಿಪತಿಯ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
೧೯೨೯ ರಲ್ಲಿ ಜನಿಸಿದ ಮಿಸ್ತಿç, ೫ ಬಿಲಿಯನ್ ಡಾಲರ್‌ಗೂ ಹೆಚ್ಚು ಎಸ್‌ಪಿ ಗ್ರೂಪ್‌ಗೆ ಮುಖ್ಯಸ್ಥರಾಗಿದ್ದರು, ಇದು ರಿಯಲ್ ಎಸ್ಟೇಟ್, ಜವಳಿ, ಶಿಪ್ಪಿಂಗ್ ಮತ್ತು ಗೃಹೋಪಯೋಗಿ ಉಪಕರಣಗಳಂತಹ ಇತರ ವ್ಯವಹಾರಗಳಲ್ಲಿ ವೈವಿಧ್ಯತೆಯನ್ನೊಳಗೊಂಡಿರುವ ಗ್ರೂಪ್. ಇವರಿಗೆ ೨೦೧೬ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.