ಬೆಳಗಾಯಿತು ವಾರ್ತೆ
ಬಳ್ಳಾರಿ : ಸಂಡೂರು ತಾಲೂಕಿನ ಎಂ. ಗಂಗಲಾಪುರ ಗ್ರಾಮದ ವ್ಯಕ್ತಿಯೊಬ್ಬ ಮೃತ ಪ್ರಕರಣ ನ್ಯಾಯಾಂಗ ತನಿಖೆಗೆ ನೀಡಲು ಒತ್ತಾಯಿಸಿ ಹಾಗೂ ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯ ನಡಸಿದವರನ್ನು ಬಂದಿಸಲು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿಮುಂದೆ ಪ್ರಚತಿಭಟನೆ ನೆಡಸಲಾಯಿತು.
ನಂತರ ಮಾತನಾಡಿದ ಪ್ರತಿಭಟನಾಕಾರರು. ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯ ವಿಠಲಪುರ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಂ ಗಂಗಲಪುರ ಗ್ರಾಮದಲ್ಲಿ ಜೂನ್ ೨೦ರಂದು ಗೊಲ್ಲರ ಆಂಜನೇಯ ಎಂಬ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಈ ಪ್ರಕರಣ ಹಿನ್ನೆಲೆಯಲ್ಲಿ ಜೂನ್ ೨೦ರಂದು ಪರಿಶಿಷ್ಟ ಪಂಗಡದ ಮಾಯಣ್ಣ ಎನ್ನುವವರನ್ನು ಅರೆಬೆತ್ತಲೆ ಗೊಳಿಸಿ ಬೀದಿಯಲ್ಲಿ ಎಳೆದುತಂದು ಗ್ರಾಮದ ಮುಖ್ಯ ಬೀದಿಯಲ್ಲಿ ಎಳೆದು ತಂದು ಗ್ರಾಮದ ಮುಖ್ಯಬೀದಿಯ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ತಳಿಸಿ ದೌರ್ಜನ್ಯ ನಡೆಸಿ ದಲಿತ ಕುಟುಂಬಗಳಿಗೆ ಬೆದರಿಕೆ ಹಾಕಲಾಗಿದೆ.
ಕ್ಷುಲ್ಲಕ ಘಟನೆ ಕಾರಣದಿಂದ ಎರಡು ಸಮುದಾಯಗಳು ಮಧ್ಯ ಘರ್ಷಣೆ ನಡೆದಿರುವುದು ಖೇದಕರ ವಿಷಯವಾಗಿದೆ. ಈ ದುರ್ಘಟನೆಯ ಬಗ್ಗೆ ನೋವು ಮತ್ತು ಖಂಡನೆಯನ್ನು ವ್ಯಕ್ತಪಡಿಸುತ್ತೇವೆ. ಕೇವಲ ವ್ಯಕ್ತಿಗಳ ನಡುವೆ ಅಹಿತಕರ ಘಟನೆ ನಡೆದಿರುವುದನ್ನೇ ನೆಪವಾಗಿರಿಸಿಕೊಂಡು ಊರಿನಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಒಡೆದು ಹಿಂಸಿಸಿ ಅವಮಾನ ಮಾಡಿದ ಕೃತ್ಯ ಕಂಡನಿಯ. ಕಾನೂನನ್ನು ಕೈಗೆತ್ತಿಕೊಂಡವರ ಮೇಲೆ ಕಠಿಣ ಕಾನೂನು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಬಹುತೇಕ ಎರಡು ಸಮುದಾಯಗಳ ಜನತೆಯು ಕೃಷಿಕರು ದುಡಿದುಣ್ಣುವ ಶ್ರಮಿಕರೇ ಆಗಿದ್ದು ಪರಸ್ಪರ ಘರ್ಷಣೆಗೆ ಇಳಿಯದಂತೆ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬರುವಂತೆ ವಿನಂತಿಸಿದ್ದಾರೆ. ದಲಿತ ವ್ಯಕ್ತಿ ಮೇಲೆ ದೌರ್ಜನ್ಯ ನಡೆದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ವಿಡಿಯೋ ಹರಿದಾಡುತ್ತಿದೆ ಈ ಘಟನೆ ಕುರಿತು ನಿಷ್ಪಕ್ಷ ತನಿಖೆ ನಡೆಸಬೇಕು ತಪ್ಪಿತಸ್ಥರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡರ‍್ರಿಸ್ವಾಮಿ ಜಿಲ್ಲಾ ಅಧ್ಯಕ್ಷರು ಬಳ್ಳಾರಿ. ಎನ್ ಮಲ್ಲಯ್ಯ. ಗೋವಿಂದಪ್ಪ. ಸತ್ಯನಾರಾಯಣ. ಹನುಮಂತಪ್ಪ. ಈರಪ್ಪ ಸೇರಿದಂತೆ ಇನ್ನಿತರರು ಇದ್ದರು.