ಹರಪನಹಳ್ಳಿ: ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕೊವೀಡ್ ನಿಭಾಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಈ ಸರ್ಕಾರಗಳು ಕೊವೀಡ್ ನಿಂದಾಗಿ ಸತ್ತ ಹೆಣಗಳ ಮೇಲೂ ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿವೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಆರೋಪ ಮಾಡಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಗರಡಿಮನೆ ಬಳಿ ಉಚಿತ ಊಟದ ಮನೆಯನ್ನು ಲೋಕಾರ್ಪಣೆ ಗೊಳಿಸಿದ ಬಳಿಕ ಮಾತನಾಡಿದ ಅವರು ಬಳ್ಳಾರಿಗೆ ಮತ್ತು ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನೂ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದ ಅವರು ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಬೇಕಾಗಿದ್ದು ಮುಂಬರುವ ದಿನಗಳಲ್ಲಿ ಈ ಕ್ಷೇತ್ರಕ್ಕೆ ಒಬ್ಬ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಸಂಡೂರು ಶಾಸಕ ಈ ತುಕಾರಾಂ ಮಾತನಾಡಿ ಕಾಂಗ್ರೆಸ್ ಎಂದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಪಕ್ಷ. ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ದಾಂತದ ಹಿನ್ನೆಲೆಯಲ್ಲಿ ಸರ್ವರಿಗೂ ಸಮ ಬಾಳು, ಸಮಪಾಲು ನೀಡಿದೆ. ಸ್ವಾತಂತ್ರ್ಯದ ನಂತರ ಅನೇಕ ಜನಪರ ಕಾರ್ಯಕ್ರಮ ನೀಡಿದ್ದು ಉಳುವವನೇ ಭೂಮಿಯ ಒಡೆಯ, ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜೈ ಜವಾನ್, ಜೈ ಕಿಸಾನ್ ಕೊಡುಗೆ ನೆನೆದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಸಿಯೂಟ, ಅನ್ನಬಾಗ್ಯ ನೀಡಿದೆ. ಸರ್ಕಾರಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯ ಬೇಕು ಆದರೆ ಈ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ರೈತರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ನೆಮ್ಮದಿ ಕೆಡಿಸಿದೆ ನಿಮ್ಮ ಮುಂದಿನ ಭವಿಷ್ಯವನ್ನು ಇಟ್ಟುಕೊಂಡು ಮತದಾನ ಮಾಡಿ ಎಂದು ನೆರೆದಿದ್ದ ಜನರಿಗೆ ಕರೆ ನೀಡಿದರು.
ಕೊವೀಡ್ ನಿಂದ ಸತ್ತಿರುವವವರ ಮಾಹಿತಿಯನ್ನು ಇದುವರೆಗೂ ನೀಡುತ್ತಿಲ್ಲ. ಕೊವೀಡ್ ನಿಂದಾಗಿ 04 ಲಕ್ಷ ಜನ ಸತ್ತಿಲ್ಲ, 44 ಜನ ಸತ್ತಿದ್ದಾರೆ. ಸತ್ತವರ ಮಾಹಿತಿ ನಿಖರವಾಗಿ ನೀಡುವಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತ್ಯ ಮರೆ ಮಾಚಿವೆ ಗುಜರಾತ್ ನಲ್ಲಿ ಖರೀದಿಸಿರುವ ವೆಂಟಿಲೇಟರ್ ಗಳು ಕಳಪೆ ಗಣಮಟ್ಟದ್ದಾಗಿವೆ. ಅವಕಾಶ ಸಿಕ್ಕಾಗ ಸಂವಿಧಾನ ಬದ್ದವಾಗಿ ಜನಸಾಮಾನ್ಯರ ಸೇವೆ ಮಾಡಬೇಕು. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಒಬ್ಬ ಒಳ್ಳೆಯ ಶಾಸಕರನ್ನು ಕೊಡುತ್ತೇವೆ ಎಂದರು.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಾತನಾಡಿ ಈ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಕರೋನಾ ವೈರಸ್ ಗಿಂತಲೂ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಯಡಿಯೂರಪ್ಪ ರೈತರ ಶಾಲು ಹಾಕಿಕೊಂಡು ರೈರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಬಿಟ್ಟರೆ ರೈತರಿಗೆ ಏನು ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದ ಕೋಟಿ ಕೋಟಿ ಪರಿಹಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಯಿತು. ಯಾವೊಬ್ಬ ಬಡ ಜನರಿಗೂ ಇನ್ನೂ ಹಣ ಮುಟ್ಟಿಲ್ಲ ಎಂದು ಆರೋಪಿಸಿದ ಅವರು ರೈತ, ಕಾರ್ಮಿಕ ವಿರೋಧಿ, ಸಂವಿಧಾನ ವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊವೀಡ್ ನಿಭಾಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಸರಿಯಾದ ಸಮಯಕ್ಕೆ ಲಸಿಕೆ ನೀಡಲಿಲ್ಲ. ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ 40, 18 ವರ್ಷದವರಿಗೆ ಸಮರ್ಪಕವಾಗಿ ಲಸಿಕೆ ನೀಡುವಲ್ಲಿ ವಿಫಲವಾಗಿದೆ ಎಂದರು.
ಕೇಂದ್ರ ಸರ್ಕಾರ ಬಳ್ಳಾರಿಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸಿದ ಅವರು ಇವರ ಯೋಗ್ಯತೆಗೆ ಒಂದು ಸ್ಮಾರ್ಟ್ ಸಿಟಿ ನೀಡಲಿಲ್ಲ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಕೇವಲ ಬಾಷಣ, ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗಿ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆ ಗೊಳಿಸುವ ಮೂಲಕ 371ಜೆ ಮೀಸಲಾತಿ ಕಲ್ಪಿಸಿದ್ದು ಈ ಕ್ಷೇತ್ರದ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಹಾಗೂ ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, 60 ಕರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡಿದ್ದು ಎಂ.ಪಿ.ರವೀಂದ್ರ. ಅವರ ಋಣ ಈ ಕ್ಷೇತ್ರದ ಜನರ ಮೇಲೆ ಇದೆ ಹಾಗಾಗಿ ಮುಂದಿನ ದಿನಗಳಲ್ಲಿ ಸಿದ್ದಾರಾಮಯ್ಯ ಅವರು ಈ ಕ್ಷೇತ್ರಕ್ಕೆ ಒಬ್ಬ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವಯೋಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕಂಚಿಕೇರಿ ಎಂ.ಟಿ.ಸುಭಾಷ್ ಚಂದ್ರ, ಪು.ಮಾಜಿ ಅಧ್ಯಕ್ಷೆ ಪುಷ್ಪ ದಿವಾಕರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಲತಾ, ಹೊಸಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಿ.ಇಮಾಮ್ ನಿಯಾಜ್, ಮುಂಡರಗಿ ನಗರಾಜ್, ಲಕ್ಷ್ಮಣ್ ನಾಯ್ಕ್, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ, ತೆಲಿಗಿ ಉಮಾಕಾಂತ್, ಮಹಾಂತೇಶ್ ನಾಯ್ಕ, ವಿಜಯ್ ದಿವಾಕರ್, ಇರ್ಫಾನ್ ಮುದುಗಲ್, ಲಾಟಿ ನವರಂಗ್, ಲಾಟಿ ದಾದಾಪೀರ್, ಗುಡಿಹಳ್ಳಿ ಹಾಲೇಶ್, ಮತ್ತೂರು ಬಸವರಾಜ್, ಹೆಚ್.ಶಿವರಾಜ್, ಸಾಸ್ವಿಹಳ್ಳಿ ನಾಗರಾಜ್, ಶ್ರೀಕಾತ್ ಯಾದವ್, ಪಿ.ಶಿವಕುಮಾರ್ ನಾಯ್ಕ, ಜಿಷಾನ್ ಹ್ಯಾರೀಸ್ ಸೇರಿದಂತೆ ಮತ್ತಿತರರು ಇದ್ದರು.