ಬೆಳಗಾಯಿತು ವಾರ್ತೆ
ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ
ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಮುಖ್ಯ ಸಭಾ ಭವನ, ಸರ್ವೆಪಲ್ಲಿ ರಾಧಾಕೃಷ್ಣ ವೇದಿಕೆ ಹಾಗೂ ಸಾವಿತ್ರಬಾಬು ಪುಲೆ’ ವೇದಿಕೆಯಲ್ಲಿ ಜು. 8 ಮತ್ತು 09 ರಂದು ಸಾಂಸ್ಕೃತಿಕ ವೈಭವ ಯುವಜನೋತ್ಸವ 2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸತೀಶ್ ಹೀರೆಮಠ ಅವರು ಹೇಳಿದರು.
ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಎರಡು ದಿನಗಳವರೆಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸಂಲಗ್ನತಿಗೊಳಪಟ್ಟ ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಪದವಿ ಹಾಗೂ ವೃತ್ತಿಪರ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೈಭವ ಯುವಜನೋತ್ಸವ 2022 ಕಾರ್ಯಕ್ರಮವನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಈ ಸಾಂಸ್ಕೃತಿಕ ಉತ್ಸವದಲ್ಲಿ ಬಳ್ಳಾರಿ ಜಿಲ್ಲೆಯ 31 ಪದವಿ ಹಾಗೂ ವೃತ್ತಿಪರ ಮಹಾವಿದ್ಯಾಲಯಗಳ 1500 ವಿದ್ಯಾರ್ಥಿಗಳು ಈ ಎರಡು ದಿನಗಳ ಕಾಲ ಗೀತಗಾಯನ, ಶಾಸ್ತ್ರೀಯ ಗಾಯನ, ಸಮೂಹ ಗೀತೆ, ಪಾಶ್ಚಾತ್ಯ ಗೀತೆ, ಚಲನಚಿತ್ರ ಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಆಶು ಭಾಷಣ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಏಕಪಾತ್ರ‍್ರಾಭಿನಯ, ನಾಟಕ, ಲಘು ನಾಟಕ (ನೈಟ್) ಕವನ ರಚನೆ, ಮಿಮಿಕ್ರಿ, ಮೂಕಾಭಿನಯ, ಕಾರ್ಟೂನ್ ರಚನೆ, ರಂಗೋಲೆ, ಫೋಟೋಗ್ರಾಫಿ, ಚಿತ್ರಕಲೆ, ತೇಪೆ ಚಿತ್ರಗಾಲಕ್ಕೆ (ಕೊಲ್ಯಾಜ್) ಜೇಡಿಮಣ್ಣು ಕಲಾಕೃತಿ ರಚನೆ (ಪ್ಲೇ ಮಾಡ ಲಿಂಗ್) ಇತ್ಯಾದಿ 27 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸ್ಪರ್ಧೆಗಳು ವಿಜಯನಗರ ಜಿಲ್ಲಾ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಕೊಟ್ಟೂರೇಶ್ವರ ಪದವಿ ಮಹಾವಿದ್ಯಾಲಯದ ಕೊಟ್ಟೂರು, ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳದಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದರು.