1.9 C
New York
Thursday, March 30, 2023

Buy now

spot_img

ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ರೋಜರ್ ಫೆಡರರ್

ಬೆರ್ನ್ – ಸ್ವಿಟ್ಜರ್‌ಲ್ಯಾಂಡ್‌ನ ಟೆನಿಸ್ ಆಟಗಾರ ರೋಜರ್ ಫೆಡರರ್ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ. ಫೆಡರರ್ ಅಭಿಮಾನಿಗಳಿಗೆ ಈ ಸಂಗತಿ ಆಘಾತ ತಂದಿದೆ. ಮೊಣಕಾಲು ಗಾಯಕ್ಕೀಡಾಗಿರುವ ಫೆಡರರ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ ಎಂದಿದ್ದಾರೆ. 20 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ವಿಂಬಲ್ಡನ್ 2021ರ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಟೂರ್ನಿಂದ ನಿರ್ಗರ್ಮಿಸಿದ್ದರು. ಆಗ ಫೆಡರರ್ ತಾನು ಈ ಸೀಸನ್‌ನಲ್ಲಿ ಗಾಯದ ಸಮಸ್ಯೆಂದ ಬಳಲುತ್ತಿರುವುದಾಗಿ ತಿಳಿಸಿದ್ದರು. 39ರ ಹರೆಯದ ರೋಜರ್ ಫೆಡರರ್ ಈ ಬೇಸಗೆಯ ಬಳಿಕ ಮತ್ತೆ ಸಂಪೂರ್ಣ ಚೇತರಿಸಿ ಸ್ಪರ್ಧೆಗಳಿಗೆ ಕಮ್ ಬ್ಯಾಕ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಬಾರಿಯ ವಿಂಬಲ್ಡನ್‌ನಲ್ಲಿ ಪೋಲ್ಯಾಂಡ್‌ನ ಹಬರ್ಟ್ ಹರ್ಕಾಕ್ಜ್ ವಿರುದ್ಧ ಫೆಡರರ್ ಸೋತು ಟೂರ್ನಿಂದ ಹೊರ ಬಿದ್ದಿದ್ದರು. ಜಪಾನ್‌ನ ಟೊಕಿಯೋದಲ್ಲಿ ಜುಲೈ 23 ರಿಂದ ಆರಂಭಗೊಳ್ಳುವ ಒಲಿಂಪಿಕ್ಸ್ ಆಗಸ್ಟ್ 8ರಂದು ಕೊನೆಗೊಳ್ಳಲಿದೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,754FollowersFollow
0SubscribersSubscribe
- Advertisement -spot_img

Latest Articles