ಬಳ್ಳಾರಿ: ಹಲವಾರು ನಿಗಮ ಮಂಡಳಿ ಸ್ಥಾಪಿಸಿದ ಯಡಿಯೂರಪ್ಪ ಅವರು ರೆಡ್ಡಿ ಸಮುದಾಯಕ್ಕೆ ಕೂಡ ನಿಗಮ ಮಂಡಳಿ ಒಂದನ್ನು ಸ್ಥಾಪಿಸಬೇಕೆಂದು ಅಖಿಲ ಭಾರತ ಜನಗಣ ಒಕ್ಕೂಟದ ಅಧ್ಯಕ್ಷರಾದ ಎನ್.ಗಂಗಿ ರೆಡ್ಡಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಕೆಲವು ಸಮುದಾಯಕ್ಕೆ ಮಾತ್ರ ನಿಗಮ ಮಂಡಳಿ ಸ್ಥಾಪಿಸಿದ ಯಡಿಯೂರಪ್ಪ ಅವರು ರೆಡ್ಡಿ ಸಮುದಾಯಕ್ಕೆ ಏಕೆ ನಿಗಮ ಮಂಡಳಿ ಮಾಡಿಲ್ಲ ..?ಎಂದು ಪ್ರಶ್ನಿಸಿದ ಅವರು ರೆಡ್ಡಿ ಸಮುದಾಯದಲ್ಲಿಯೂ ಕೂಡ ಒಂದೊತ್ತಿನ ಊಟಕ್ಕೂ ಪರದಾಡುವ ಜನರಿದ್ದಾರೆ ಅಂತಹ ಜನರ ಕುರಿತು ತಮಗೆ ಕಾಳಜಿ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಗಮ ಮಂಡಳಿ ಸ್ಥಾಪಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಯಡಿಯೂರಪ್ಷ ಅವರ ವಿರುದ್ಧ ವಾಗ್ದಾಳಿ ನಡೆಸಿದರು.