ಬೆಳಗಾಯಿತು ವಾರ್ತೆ
ಕೊಟ್ಟೂರು: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಶ್ವೇತಾ ಭೀಮಾಶಂಕರ ಭೈರಗೊಂಡ, ಸಹನಾ ಮಡಿವಾಳರ ಈ ಇಬ್ಬರೂ ವಿದ್ಯಾಥಿಗಳು 600 ಅಂಕಗಳಿಗೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಇದೇ ಕಾಲೇಜಿನ ಜಿ ಮೌನೇಶ್ 593, ಸಮೀರ್ 591, ಶಾಂತಾ ಜಿ 591, ಕಾವೇರಿ ಜಗ್ಗಲ್ 591 ಅಂಕಗಳನ್ನು ಪಡೆದಿದ್ದಾರೆ.
ಕೊಟ್ಟೂರಿನ ಇಂದು ಪಿಯು ಕಾಲೇಜು ಕಲಾ ವಿಭಾಗದಲ್ಲಿ ಸತತ 5 ವರ್ಷಗಳಿಂದ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುತ್ತ ಬಂದಿರುವುದು ಗಮನಾರ್ಹವಾಗಿದೆ.