ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಪಾಲಿಕೆಯ ಕಮಿಷನರ್ ನಡೆ ವಿರೋಧಿಸಿ ಮೇಯರ್ ಮತ್ತು ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ನೇತೃತ್ವದಲ್ಲಿ ಪಾಲಿಕೆ ಸದಸ್ಯರೊಂದಿಗೆ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೊಟ್ ಅವರು ಹೋಟೆಲ್ ಮಾಲೀಕರೊಂದಿಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಮ್ಮಿಕೊಂಡಿದ್ದ ಸಭೆಗೆ ಮೇಯರ್ ಮತ್ತು ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯರನ್ನು ಆಹ್ವಾನಿಸದೆ ಸಭೆ ನಡೆಸಲಾಗಿದೆ ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
*ನಡೆದದ್ದು ಏನೂ*
ಪ್ಲಾಸ್ಟಿಕ್ ನಿಷೇಧ ಕುರಿತು ಹಮ್ಮಿಕೊಂಡಿದ್ದ ಸಭೆಗೆ ಮೇಯರ್ ಸಮಯಕ್ಕೆ ಸರಿಯಾಗಿ ಬಂದರು ಕಮಿಷನರ್ ಬರುವುದು ತಡವಾದ ಹಿನ್ನೆಲೆ ಮೇಯರ್ ಸಭೆಯನ್ನು ಪ್ರಾರಂಭಿಸಿರಲಿಲ್ಲ ಆದರೆ ಸಭೆಗೆ ತಡವಾಗಿ ಬಂದ ಕಮಿಷನರ್ ಮೇಯರ್ ಅವರನ್ನು ಆಹ್ವಾನಿಸಿದೆ ಸಭೆಯನ್ನು ಪ್ರಾರಂಭಿಸಿದ್ದು ಪ್ರತಿಭಟನೆ ಕಾರಣವಾಗಿದೆ.
ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರು ಮಾತನಾಡಿ ಕಮಿಷನರ್ ಬದಲಾಗುತ್ತಾರೆ ಎಂದು ಇಷ್ಟು ದಿನ ನಿರೀಕ್ಷೆಯಿತ್ತು
ಆದರೆ ಅವರಲ್ಲಿ ಬದಲಾವಣೆ ಕಂಡು ಬರುತ್ತಿಲ್ಲ ಬರುತ್ತಿಲ್ಲ ಬಾಡಿ ಮೀಟಿಂಗ್ ಆಗಿ ಒಂದು ತಿಂಗಳಾದರೂ ಯಾವುದೇ ಪ್ರೋಗ್ರೆಸ್ ಕಂಡುಬರುತ್ತಿಲ್ಲ.
ಸದಾ ಸಭೆಗಳಲ್ಲಿ ಮಗ್ನರಾಗಿದ್ದು ಜಿಲ್ಲಾಧಿಕಾರಿಗಳು ಇಲ್ಲವೇ ಎಂಜಿನಿಯರುಗಳ ಮೀಟಿಂಗ್ ಇರುತ್ತಾರೆ. ಇಂಜಿನಿಯರ್ ಗಳಿಗೆ ಸರಿಯಾಗಿ ಕೆಲಸ ಮಾಡಲು ಸಹ ಬಿಡುತ್ತಿಲ್ಲ, ನಾವು ಏನಾದರೂ ಸಲಹೆ ಕೊಟ್ಟರು ಕಮಿಷನರ್ ಆದೇಶ ಇದೆ ಎಂಬ ಕಾರಣ ನೀಡುತ್ತಾರೆ. ಇಂಜಿನಿಯರ್ ನಮ್ಮ ಮಾತು ಕೇಳುತ್ತಿಲ್ಲ.
ಇಂದಿನ ಸಭೆಗೆ ಸಮಯಕ್ಕೆ ಸರಿಯಾಗಿ ನಾನು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಬಂದೆವು ಆದರೆ ಕಮೀಷನರ್ ಇನ್ನೂ ಬಂದಿರಲಿಲ್ಲ ಆದ್ದರಿಂದ ಸಭೆಯನ್ನು ಮುಂದೂಡಿ ಒಂದುವರೆ ಗಂಟೆ ಕಾಲ ಕಮೀಷನರ್ ಗಾಗಿ ಕಾಯುತ್ತಿದ್ದೇವೆ. ಆದರೆ ತಡವಾಗಿ ಬಂದ ಕಮೀಷನರ್ ನಮಗೆ ಮಾಹಿತಿ ನೀಡಿದೆ ಸಭೆ ಆರಂಭಿಸಿದ್ದಾರೆ. ಕಮಿಷನರ್ ನಮಗೆ ಸಾಹಕಾರ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ದೂರು ಕೊಡಲಾಗುವುದು ಎಂದರು.
ಪಾಲಿಕೆ ಆಯುಕ್ತರಾದ ಪ್ರೀತಿಗೆ ಗೆಹ್ಲೋಥ್ ಅವರು ಮಾತನಾಡಿ ಪಾಲಿಕೆಯಲ್ಲಿ ಆಡಳಿತಾತ್ಮಕ ಸಭೆಗಳನ್ನು ನಡೆಸಲಾಗುತ್ತಿದ್ದು ಆಡಳಿತಾತ್ಮಕ ಸಭೆಗಳು ಬಹುತೇಕ ಕಮಿಷನರ್ ನೇತೃತ್ವದಲ್ಲಿ ನಡೆಯುತ್ತದೆ ಆದರೂ ಎಲ್ಲರಿಗೂ ಸಭೆಯ ಕುರಿತು ಮಾಹಿತಿ ನೀಡಿದ್ದೇವೆ. ನಾನು ಸಭೆ ಬರುವುದು ತಡವಾಗುತ್ತದೆ ಸಭೆ ಆರಂಭಿಸುವಂತೆ ಹೇಳಿದ್ದೆ.ಆದರೂ ಸಭೆ ಅರಂಭಿಸಿರಲಿಲ್ಲ. ಇದೂ ಆರೋಗ್ಯಕ್ಕೆ ಸಂಬಂಧಿಸಿದ ಸಭೆಯಾಗಿದ್ದು ಆ ಸಮಯದಲ್ಲಿ ಮೇಯರ್ ಮತ್ತು ಸ್ಟ್ಯಾಂಡಿಂಗ್ ಕಮಿಟಿ ಅಧ್ಯಕ್ಷರು ಸ್ಥಳದಲ್ಲಿ ಇರಲಿಲ್ಲ ಜನರು ಬಹಳ ಸಮಯದಿಂದ ಕಾಯುತ್ತಿರುವುದರಿಂದ ಜನರಿಗೆ ತೊಂದರೆ ಆಗಬಾರದು ಎಂದು ಸಭೆಯನ್ನು ಆರಂಭಿಸಲಾಗಿದೆ. ಉದ್ದೇಶಪೂರ್ವಕವಾಗಿ ಮೇಯರ್ ಮತ್ತು ಸ್ಟ್ಯಾಂಡಿಂಗ್ ಕಮಿಟಿಯನ್ನು ದೂರವಿಡುವ ಉದ್ದೇಶ ನಮಗಿಲ್ಲ