ಬೆಳಗಾಯಿತು ವಾರ್ತೆ
ಬಳ್ಳಾರಿ: ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜುಲೈ 05ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಕಾರ್ಯಾಧ್ಯಕ್ಷ ಮಿನಳ್ಳಿ ತಾಯಣ್ಣ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಧ್ಯಕ್ಷರ ನೇತೃತ್ವದಲ್ಲಿ ಹಮಾಲಿ ಮಾಲಿಕರ ಹತ್ತು ಬೇಡಿಕೆಗಳನ್ನು ಮುಂದೆ ಇಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಾರಿಗೆ ಹಮಾಲು ಬಾಡಿಕೆ ಮತ್ತು 100ರೂ. ಕಮೀಷನ್ ನೀಡಲಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ದೆಹಲಿಯಲ್ಲಿ 240, ಮಹಾರಾಷ್ಟçದಲ್ಲಿ 200, ವೇಸ್ಟ್ ಬೆಂಗಾಲ್, ಕೇರಳಾ, ಗೋವಾದಲ್ಲಿ 300 ರೂ. ಕಮೀಷನ್ ನೀಡಲಾಗುತ್ತಿದೆ. ಹಾಗಾಗಿ ನಮ್ಮ ರಾಜ್ಯದಲ್ಲಿ 440 ರೂ ಕಮೀಷನ್ ನೀಡಬೇಕು ಎಂದು ಸರ್ಕಾರಕ್ಕೆ ಪತ್ರಿಭಟನೆ ಮೂಲಕ ಒತ್ತಾಯ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ್ ಹೆಗಡೆ, ಮಲ್ಲೇಶ್ ಗೌಡ, ಜಗನ್ನಾಥ್ ಗೌಡ, ಪಾಲಕ್ಷ ರೆಡ್ಡಿ, ಸಿದ್ದಪ್ಪ, ಹೇಮಣ್ಣ ಹಾಜರಿದ್ದರು.