ಬಳ್ಳಾರಿ: ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ವರದಿ ಅನ್ವಯ ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ7.5 ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಮೇ.20ರಂದು ನಗರದಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ನಾರಯಣ ರಾವ್ ಪರ‍್ಕಿನಿಂದ ನಗರದ ರಾಯಲ್ ವೃತ್ತದಲ್ಲಿ ಆಗಮಿಸಿ ಮಾನವ ಸರಪಳಿ ನರ‍್ಮಿಸುವ ಮೂಲಕ ರಸ್ತೆ ತಡೆದು ರ‍್ಕಾರದ ವಿರುದ್ಧ ಘೋಷಣೆ ಕೂಗಿದರು. ತದನಂತರ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರ‍್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಶಾಸಕ ನಾಗೇಂದ್ರ ಅವರು ಮಾತನಾಡಿ ಎಸ್ಟಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ೭.೫ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪರ‍್ಕಿನಲ್ಲಿ ಪ್ರಸನ್ನಾನಂದಾ ಪುರಿ ಸ್ವಾಮೀಜಿ ಗಳ ಧರಣಿ ಸತ್ಯಾಗ್ರಹ ಮೇ ೨೦ಕ್ಕೆ ೧೦೦ ದಿನ ಪೂರೈಸಲಿದ್ದು ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲ ಸೂಚಿಸಲು ರಾಜ್ಯ ದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ.ಜಾತಿ ಮತ್ತು ಪ.ಪಂಗಡದ ಸಮುದಾಯದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಚಳಿ,ಮಳೆ,ಗಾಳಿ ಲೆಕ್ಕಿಸದೇ ಪ್ರಸನ್ನಾನಂದ ಸ್ವಾಮೀಜಿಗಳು ಧರಣಿ ಕುಳಿತ್ತಿದ್ದಾರೆ ಆದರೂ ಎಸ್ಟಿ ಸಮುದಾಯ ಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ರ‍್ಕಾರ ಮೀನಾಮೇಷ ಎಣಿಸುತ್ತಿದೆ ಹೀಗೆ ಮುಂದು ವರೆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಸಂರ‍್ಭದಲ್ಲಿ ಕಮಲ ಮರಿಸ್ವಾಮಿ, ಮಾನಯ್ಯ, ಮಲ್ಲಯ್ಯ, ಕೆಕೆಹಾಳ್ ಸತ್ಯಣ್ಣ, ಗೋವಿಂದ, ಪುಷ್ಪ, ಗಡ್ಡಂ ತಿಮ್ಮಪ್ಪ, ಬಸರ ಕೋಡು ಗೋವಿಂದ, ಸೇರಿದಂತೆ ವಿವಿಧ ಪ.ಜಾತಿ ಮತ್ತು ಪ. ಪಂಗಡದ ಸಮುದಾಯದ ಸಂಘಟನೆಗಳ ಮುಖಂಡರು ಇದ್ದರು