ಬಳ್ಳಾರಿ: ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಾಲ ಶುಲ್ಕ ವಿಧಿಸುವುದನ್ನು ವಿರೋಧಿಸಿ ಶ್ರೀ ಮತಿ ಗಡಗಿ ಅಕ್ಕನಾಗಮ್ಮ ಚಾರಿಟೇಬಲ್ ಟ್ರಸ್ಟಿ ವತಿಯಿಂದ ಕೇಸ್ ದಾಖಲಿಸಲಾಗಿದೆ ಎಂದು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ರಾದ ರಾಕೇಶ್ ಅವರು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯನ್ನು ಉದ್ಧೇಶಿ ಮಾತನಾಡಿದ ಅವರು ಶ್ರೀ ಮತಿ ಗಡಗಿ ಅಕ್ಕನಾಗಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರೋನಾ ಸಂದರ್ಭದಲ್ಲಿ ಹಲವಾರು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ತೊಂದರೆ ಆಗುತ್ತಿದೆ ಎಂದು ಸರ್ಕಾರ 2020-21 ಹಾಗೂ 2021-22ನೇ ಸಾಲಿನ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಾಲಾ ಶುಲ್ಕ ವಿಧಿಸಬಾರದು ಎಂದು ಸರ್ಕಾರ ಆದೇಶಿಸಿತ್ತು.
ಸರ್ಕಾರ ಮದ್ಯ ಪ್ರವೇಶ ಮಾಡುವಂತಿಲ್ಲ…
ಈಗಾಗಲೇ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳು ಸಂಘಟಿತರಾಗಿ ವಿದ್ಯಾರ್ಥಿ ಗಳಿಗೆ ನಿಗದಿ ಪಡಿಸುವ ಫೀಸ್ ವಿಚಾರದಲ್ಲಿ ಸರ್ಕಾರ ಮದ್ಯ ಪ್ರವೇಶ ಮಾಡುವಂತಿಲ್ಲ ಎಂದು ಒತ್ತಾಯಿಸಿ ಒಟ್ಟು ಹತ್ತು ರಿಟ್ ಪಿಟಿಷನ್ ಗಳನ್ನು ಹಾಕಲಾಗಿದ್ದು. ಅದರಲ್ಲಿ ಒಂದು ರಿಟ್ ಪಿಟಿಷನ್ ಬೆಂಗಳೂರಿನಲ್ಲಿರುವ ವಿದ್ಯಾರ್ಥಿಗಳ ಪೋಷಕರು ಸಂಘಟಿತರಾಗಿ ತಮ್ಮ ಮಕ್ಕಳ ಮತ್ತು ವಿದ್ಯಾರ್ಥಿಗಳ ಪೋಷಕರ ಹಿತಾಸಕ್ತಿ ಕಾಪಡುವ ಸಲುವಾಗಿ ರಿಟ್ ಪಿಟಿಷನ್ ಹಾಕಿದ್ದಾರೆ. ಅದರಂತೆ ವಿದ್ಯಾರ್ಥಿಗಳ ಪೋಷಕರು ಪರವಾಗಿ ನಮ್ಮ ಸಂಸ್ಥೆವತಿಯಿಂದ ಪೋಷಕರ ಮತ್ತು ವಿಧ್ಯಾರ್ಥಿ ಗಳ ಹಿತಾಸಕ್ತಿ ಕಾಪಡುವ ಸಲುವಾಗಿ ಈಗಾಗಲೇ ನಮ್ಮ ಸಂಸ್ಥೆವತಿಯಿಂದ ರಿಟ್ ಪಿಟಿಷನ್ ಸಹ ದಾಖಲಿಸಿದ್ದೇವೆ ಎಂದ ಅವರು ಇದೇ ತಿಂಗಳು ಜುಲೈ22ರಂದು ಕೇಸ್ ವಿಚಾರಣೆ ನಡೆಯಲಿದೆ ಎಂದರು.
ದುರುಪಯೋಗ
2020 ರಲ್ಲಿ ಬಂದ ಕೋರ್ಟ್ ಆದೇಶ ಅನುಸಾರ ಖಾಸಗಿ ಶಾಲೆಗಳು ವಿದ್ಯಾರ್ಥಿ ಗಳಿಗೆ ನಿಗದಿ ಪಡಿಸುವ ಫೀಸ್ ವಿಚಾರದಲ್ಲಿ ಸರ್ಕಾರ ಮದ್ಯ ಪ್ರವೇಶ ಮಾಡುವಂತಿಲ್ಲ ಎಂಬ ಆದೇಶ ಬಂದಿದೆ. ಅದನ್ನು ದುರುಪಯೋಗ ಪಡಿಸಿಕೊಂಡ ಖಾಸಗಿ ಸಂಸ್ಥೆ ಗಳು ಸಂಘಟಿತರಾಗಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಕಾನೂನು ಸಲಹೆ
ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ ವಿದ್ಯಾರ್ಥಿಗಳ ಪೋಷಕರು ಕಾನೂನು ಸಲಹೆಗಾಗಿ 9591326214 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.