24.3 C
New York
Friday, July 30, 2021

Buy now

spot_img

ಬಿತ್ತನೆ ಬೀಜ ವಿತರಣೆಯಲ್ಲಿ ಆಗುತ್ತಿರುವ ಅವಾಂತರಗಳನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ: ಜಿಲ್ಲೆಯಲ್ಲಿ ಮೆಣಸಿಕಾಯಿ ಬಿತ್ತನೆ ಬೀಜ ವಿತರಣೆಯಲ್ಲಿ ಆಗುತ್ತಿರುವ ಅವಾಂತರಗಳನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ
ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿ ಹಾಗೂ
ಮಾಧ್ಯಮ ಸಲಹೆಗಾರರು ಹಾಗೂ ಜಿಲ್ಲಾ ಕಾಂಗ್ರೆಸ್ ಜನರಲ್ ಸೆಕ್ರೇಟರಿಗಳಾದ ಕಾಂತಿ ನೋವಾ ವಿಲ್ಸನ್ ಅವರಿಂದ ಶನಿವಾರ ಮನವಿ ಸಲ್ಲಿಸಲಾಯಿತು.

ಬಳ್ಳಾರಿ ಜಿಲ್ಲೆಯಲ್ಲಿ ಮೇಣಸಿನಕಾಯಿ ಮತ್ತು ಇತರೆ ಬಿತ್ತನೆ ಬೀಜದ ಕೃತಕ ಅಭಾವ ಉಂಟಾಗಿದ್ದು, ಬೀಜ ವಿತರಕರು ಬಿತ್ತನೆ ಬೀಜವನ್ನು ರೈತರಿಗೆ ಕೊಡದೆ ಕಳ್ಳ ಮಾರುಕಟ್ಟೆಯಲ್ಲಿ, ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಸಂಭಂಧ ಪಟ್ಟ ಇಲಾಖೆಯವರು ಈ ಮಾಹಿತಿ ತಿಳಿದಿದ್ದರೂ ಕೂಡ ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದರೆ, ಹಣಮಾಡುತ್ತಿರುವಂತೆ ಕಾಣುತ್ತಿದೆ, ಜಿಲ್ಲಾಡಳಿತವು ಸಹ ಕಣ್ಣು ಮುಚ್ಚಿ ಕುಳಿತಿದೆ. ಈ ಕುರಿತು ಯಾವುದೇ ಪರಿಹಾರ ಕಾರ್ಯಕ್ರಮಗಳನ್ನು ತೆಗೆದುಕೊಳ್ಳದೆ ಮೂಖ ಪ್ರೇಕ್ಷಕರಂತೆ ಇರುವುದು ವಿಷಾಧನೀಯ. ದಿನಂಕ 12-06-2021 ರಂದು ರೈತರ ಮೇಲೆ ಲಾಟಿಚಾರ್ಜ್ ಕೂಡ ಮಾಡಿ, ಬಳ್ಳಾರಿಯ ರೈತರಿಗೆ ಮಸಿಬಳೆಯುವ ಕೆಲಸ ಮಾಡಿದ್ದಾರೆ. ರೈತರಿಗೆ ಬೇಕಾದ ಸೆಂಜಂಟು ಕಂಪನಿಯ ತಳಿಯ ಬೀಜ, ಮೇಣಸಿನಕಾಯಿ ಬೀಜಗಳ ಬೇಡಿಕೆ ಹೆಚ್ಚಿದ್ದು ಅದರ ವಿತರಣೆಯಲ್ಲಿ ಅಭಾವ ಉಂಟಾಗಿದೆ. ಆದ್ದರಿಂದ ಸಂಭಂಧ ಪಟ್ಟ ಇಲಾಖೆಯವರು ಬಿತ್ತನೆ ಬೀಜ ಸಿಗುವಂತೆ ಸಂಭಂಧ ಪಟ್ಟ ಕಂಪನಿಯವರಿಗೆ ಸೂಚಿಸಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾನ್ಯ ಮಾಜಿ ಸಂಸದರು ವಿ.ಎಸ್.ಉಗ್ರಪ್ಪ ನವರ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಸೂಕ್ತ ಕ್ರಮವನ್ನು ತೆಗೆದುಕೊಳ್ಳತ್ತೇವೆಂದು ತಿಳಿಸಿರುತ್ತಾರೆ. ಮಾನ್ಯ ಮಾಜಿ ಸಂಸದರು ಸಂಭಂದ ಪಟ್ಟ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಕೂಡ ಸಂಪರ್ಕಿಸಿ ಬಿತ್ತನೆ ಬೀಜಗಳು ಕೃತಕ ಅಭವವನ್ನು ನೀಗಿಸಿ ರೈತರಿಗೆ ಬಿತ್ತನೆ ಬೀಜ ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದಾಗ, ಅವರು ಸಹ ಸಂಭಂದ ಪಟ್ಟ ಇಲಾಖೆಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಕ್ರಮ ಜರುಗಿಸಿ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವಂತೆ ಸೂಚನೆ ಕೊಟ್ಟಿರುತ್ತಾರೆ. ಆದ್ದರಿಂದ ಸಂಭಂದ ಪಟ್ಟ ಇಲಾಖೆಯವರು ಸೂಕ್ತ ರೀತಿಯಲ್ಲಿ ಕಾರ್ಯ ಪ್ರೌರುತ್ತರಾಗಿ, ಜಿಲ್ಲೆಯ ರೈತರಿಗೆ ಬಿತ್ತನೆ ಬೀಜಗಳನ್ನು ಸಿಗುವಂತೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಗ್ರ ಹೋರಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,875FollowersFollow
0SubscribersSubscribe
- Advertisement -spot_img

Latest Articles