ಲಕ್ನೋ, ಜುಲೈ 20( ಯುಎನ್ ಐ)- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಧ್ಯೆಯ ರಾಮಲಲ್ಲಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಮುಂದಿನ ತಿಂಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅಲ್ಲದೆ, ಗೋರಕ್ ಪುರದಲ್ಲಿ ಆಯುಷ್ ವಿಶ್ವವಿದ್ಯಾಲಯಕ್ಕೆ ಅಡಿಗಲ್ಲು ಇರಿಸಲಿರುವ ಕಾರ್ಯಕ್ರಮಸಹ ನಿಗಧಿಯಾಗಿದೆ ಎಂದು ಅಧಿಕಾರಿ ಮೂಲಗಳು ಹೇಳಿವೆ.ಗಸ್ಟ್ 27ರಿಂದ 29ರವರೆಗೆ ರಾಷ್ಟ್ರಪತಿಗಳ ಉತ್ತರ ಪ್ರದೇಶ ಕಾರ್ಯಕ್ರಮ ನಿಗದಿಯಾಗಿದೆ. ಆಗಸ್ಟ್ 27 ರಂದು ರಾಷ್ಟ್ರಪತಿ ವಿಶೇಷ ವಿಮಾನದ ಮೂಲಕ ಅಮೌಸಿ ವಿಮಾನ ನಿಲ್ದಾಣ ತಲುಪಲಿದ್ದು, ಆಗಸ್ಟ್ 28ರಂದು ವಿಶೇಷ ವಿಮಾನದಲ್ಲಿ ಗೋರಕ್ ಪುರಕ್ಕೆ ತೆರಳಿ ಆಯುಷ್ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ, ಗುರು ಗೋರಕ್ ನಾಥ್ ವಿಶ್ವವಿದ್ಯಾಲಯ ಆಸ್ಪತ್ರೆ ನಿರ್ಮಾಣವನ್ನು ಉದ್ಘಾಟಿಸಲಿದ್ದಾರೆ. ನಂತರ ಅದೇ ದಿನ ಲಕ್ನೋ ಹಿಂದಿರುಗಲಿದ್ದಾರೆ. ಆಗಸ್ಟ್ 29ರಂದು ವಿಶೇಷ ರೈಲಿನಲ್ಲಿ ಆಯೋಧ್ಯೆಗೆ ತೆರಳಿಲಿದ್ದು ಅಲ್ಲಿ ರಾಮಲಲ್ಲಾ ಹಾಗೂ ಹನುಮಗ್ರಾಹಿ ದೇಗಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದನಂತರ ಅಂದೇ ಲಕ್ನೋಗೆ ವಾಪಸ್ಸಾಗಲಿದ್ದು, ರಾಷ್ಟ್ರಪತಿ ಆಗಸ್ಟ್ 30ರಂದು ದೆಹಲಿಗೆ ಹಿಂದಿರುಗಲಿದ್ದಾರೆ.