ಪೊಲೀಸ್ ಸಿಬ್ಬಂದಿ, ಕುಟುಂಬ ಸದಸ್ಯರ ಉಚಿತ ಕಣ್ಣಿನ ತಪಾಸಣಾ ಶಿಬಿರ

0
351

ಹರಪನಹಳ್ಳಿ: ತಾಲೂಕಿನ ಅರಸೀಕೆರೆಯ ಪೊಲೀಸ್ ಠಾಣೆಯ ಮೈದಾನದಲ್ಲಿ ಠಾಣೆಯ ಸಿಬ್ಬಂದಿ ವರ್ಗದವರಿಗೆ ಹಾಗೂ ಅವರ ಕುಟುಂಬದವರಿಗೆ ಕಠಾರೆ ಐ ಅಪ್ಟಿಕಲ್ಸ್ ಕಂಪನಿ ವತಿಯಿಂದ ಉಚಿತ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸಂಸದ ವೈ.ದೇವೇಂದ್ರಪ್ಪ ಅವರು ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಮನುಷ್ಯನ ಅಂಗಗಳಲ್ಲಿ ಕಣ್ಣು ಅತಿಮುಖ್ಯ, ಕಣ್ಣು ಇಲ್ಲದಿದ್ದರೆ ಜೀವಿಸುವುದು ತುಂಬಾ ಕಷ್ಟ ಸಾಧ್ಯ, ಪೊಲೀಸರಿಗೆ ಬಿಡುವಿಲ್ಲದ ಕಾರಣ ಕಣ್ಣಿನ ತಪಾಸಣೆ ಮಾಡಿಸುವುದು ತುಂಬಾ ಕಷ್ಟಕರವಾಗಿದ್ದು ಕಠಾರೆ ಐ ಅಪ್ಟಿಕಲ್ಸ್ ಕಂಪನಿ ವತಿಯಿಂದ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದ ಅವರು ಪ್ರತಿಯೊಬ್ಬರೂ ಈ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಸಿಬ್ಬಂದಿಗಳಿಗೆ ಸಲಹೆ ನೀಡಿದರು.

Previous articleಚಿಕ್ಕಿ ಘಟಕದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ
Next articleಯುಗಾದಿ ಶುಭಾಶಯ ಕೋರಿದ ಪ್ರಧಾನಿ

LEAVE A REPLY

Please enter your comment!
Please enter your name here