ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 114 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗೌರವ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, “ಕೆಚ್ಚೆದೆಯ ಭಗತ್ ಸಿಂಗ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಅವರ ಧೈರ್ಯಶಾಲಿ ತ್ಯಾಗ ಅಸಂಖ್ಯಾತ ಜನರಲ್ಲಿ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿತು. ಅವರ ಜಯಂತಿಯಂದು ನಾನು ಆತನಿಗೆ ತಲೆಬಾಗುತ್ತೇನೆ ಮತ್ತು ಅವರ ಉದಾತ್ತ ಆದರ್ಶಗಳನ್ನು ಸ್ಮರಿಸುತ್ತೇನೆ” ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ 1907 ರಲ್ಲಿ ಈ ಹಿಂದೆ ಲಯಲ್ಪುರ್ ಹೆಸರಿನಿಂದ ಕರೆಯಲ್ಪಡುತ್ತಿದ್ದ, ಫೈಸಲಾಬಾದ್ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಇದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ.
ಭಗತ್ ಸಿಂಗ್ ಅವರನ್ನು ಅವರ 23 ನೇ ವಯಸ್ಸಿನಲ್ಲಿ ಆಗಿನ ಬ್ರಿಟಿಷ್ ಇಂಡಿಯಾದ ಲಾಹೋರ್ ಪಂಜಾಬ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.