ನವದೆಹಲಿ: ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹ ಮಾಡಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಬಳಿಕ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ ದಿವ್ಯ ಮಂತ್ರವಾಗಿದೆ. ಎಲ್ಲರ ಪ್ರಯತ್ನದಿಂದ ಸದೃಢ ಮತ್ತು ಸ್ವಾವಲಂಬಿ ಭಾರತ ಕಟ್ಟ ಬೇಕಿದೆ. ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ ಎಂಬುದೇ ಸರ್ಕಾರದ ಗುರಿಯಾಗಿದೆ ಎಂದು ಒಗ್ಗಟ್ಟಿನ ಮಂತ್ರವೇ ದೇಶದ ಜೀವಾಳ ಎಂದು ಹೇಳಿದರು.
ದೇಶದಿಂದ ಕೊರೋನ ತೊಲಗಿಸಲು ವೈದ್ಯರು, ದಾದಿಯರು ಪೊಲೀಸರು ಇದ್ದರೆ ಸಿಬ್ಬಂದಿ ಜೀವದ ಹಂಗು ತೊರೆದು ಸಮಾಜದ ಆರೋಗ್ಯ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಎಷ್ಟು ಅಭಿನಂದನೆ ಹೇಳಿದರು ಸಾಲದು ಅವರ ಮಾನವೀಯ ಸೇವೆಯನ್ನು ದೇಶದ ಎಂದೆಂದಿಗೂ ಸ್ಮರಿಸುತ್ತದೆ ಎಂದರು.
ವಿಶ್ವದ ಬೃಹತ್ ಲಸಿಕ ಅಭಿಯಾನಕ್ಕೆ ಭಾರತ ಸಾಕ್ಷಿಯಾಗಿದೆ ಇದುವರೆಗೆ 54 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ ಮುಂಬರುವ ದಿನಗಳಲ್ಲಿ ಕೊರೋನಾ ವಿರುದ್ದದ ಹೋರಾಟ ಮುಂದುವರಯಲಿದೆ ದೇಶವನ್ನು ಕೊರೋನ ಮುಕ್ತ ಮಾಡುವ ಕಡೆಗೆ ನಮ್ಮ ಅಚಲ ಪಯಣ ಮುಂದುವರೆಯಲಿದೆ ಎಂದರು.
ದೇಶ 100ನೆ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಆತ್ಮ ನಿರ್ಭರ ಭಾರತ ಪರಿಕಲ್ಪನೆಯ ಗುರಿ ಮತ್ತು ಧ್ಯೇಯ ನನಸಾಗಲಿದೆ. ವಿಶ್ವದ ಬೃಹತ್ ಶಕ್ತಿಶಾಲಿ ರಾಷ್ಟ್ರವಾಗಿ, ಸ್ವಾವಲಂಬಿ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂಬ ಸದಾಶಯವನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ್ದಾರೆ .