ವಾರಾಣಸಿ – ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಪ್ಯಾನ್ ಇಂಡಿಯಾ ಯೋಜನೆ-ಪಿಎಂಎಎಸ್‌ಬಿವೈಗೆ ಚಾಲನೆ ನೀಡಿದ್ದಾರೆ.
ಸೋಮವಾರ ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಿಂದ 64,180ಕೋಟಿ ರೂ. ವೆಚ್ಚದ ಪಿಎಂಎಎಸ್‌ಬಿವೈ ಅನ್ನು ಪ್ರಾರಂಭಿಸುವುದರ ವಾರಾಣಸಿ ಕ್ಷೇತ್ರಕ್ಕಾಗಿ ರೂ. 5189 ಕೋಟಿಗಳಿಗಿಂತ ಹೆಚ್ಚು ಮೌಲ್ಯದ 28 ಯೋಜನೆಗಳನ್ನು ಉದ್ಘಾಟಿಸಿದರು.