ನವದೆಹಲಿ-ಕೊರೋನಾ ಕಾರಣಕ್ಕಾಗಿ ಕಳದೆ ಒಂದೂವರೆ ವರ್ಷಗಳಿಂದ ವಿದೇಶ ಪ್ರವಾಸದಿಂದ ದೂರವಿರುವ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳಾಂತ್ಯಕ್ಕೆ ಅಮೆರಿಕಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ಪ್ರವಾಸ ಕಾಲದಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
22ರಿಂದ ಸೆ. 27ರ ವರೆಗೆ ಮೋದಿಯವರು ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ಗೆ ಭೇಟಿ ನೀಡುವ ಸಾಧ್ಯತೆಯಿದೆ. ಮೋದಿ ಮತ್ತು ಬೈಡೆನ್ ಅಫ್ಘಾನಿಸ್ತಾನದ ಇತ್ತಿಚಿನ ಬೆಳವಣಿಗೆ, ಇಂಡೋ-ಪೆಸಿಫಿಕ್ ಕಾರ್ಯಸೂಚಿ, ಜೊತೆಗೆ ಚೀನಾ ಒಡ್ಡುತ್ತಿರುವ ಸವಾಲುಗಳ ವಿಚಾರ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಗಂಭೀರ ಸಮಾಲೋಚನೆ ನಡೆಸಲಿದ್ದಾರೆ.
ಉಭಯ ನಾಯಕರು ಈಗಾಗಲೇ ಕನಿಷ್ಠ ಮೂರು ಬಾರಿ ವರ್ಚುವಲ್ ಶೃಂಗಗಳ ವೇಳೆ ಭೇಟಿಯಾಗಿದ್ದರೂ ಮುಖಾಮುಖೀಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು ಎಂದು ಪಿಎಂ ಕಚೇರಿ ಮೂಲಗಳು ಹೇಳಿವೆ .