ಬೆಂಗಳೂರು: ‘ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉತ್ತರ ಕರ್ನಾಟಕ ಭಾಗದ ಯುವಕರು ಇಲ್ಲಿಯೇ ‘ಪೈಲೆಟ್ ತರಬೇತಿ ಪಡೆಯಬಹುದು’ ಎಂದು ವಿಮಾನ ನಿಲ್ದಾಣ ನಿರ್ದೇಶಕರು ತಿಳಿಸಿದ್ದಾರೆ.
ಏಷ್ಯಾ ಫೆಸಿಪಿಕ್ ಫ್ಲೈಟ್ ಟ್ರೆöÊನಿಂಗ್ ಅಕಾಡೆಮಿ ಮತ್ತು ೧೦೦ ಬರ್ಡ್ ಫ್ಲೈಟ್ ಟ್ರೆöÊನಿಂಗ್ ಅಕಾಡೆಮಿಗೆ ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳು ಪ್ರಾಧಿಕಾರ ಒದಗಿಸಿದ್ದು, ಇನ್ನು ಮುಂದೆ ಪೈಲೆಟ್ ತರಬೇತಿ ಪಡೆಯಲು ಉತ್ತರ ಕರ್ನಾಟಕ ಭಾಗದ ಯುವಕರು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ ಎಂದು ಅವರು ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬರುತ್ತಿರುವ ವೈಮಾನಿಕ ತರಬೇತಿ ಸಂಸ್ಥೆಗಳಿAದ ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸುಮಾರು ೧೦೦ ಜನರು ಇಲ್ಲಿ ಪೈಲೆಟ್ ತರಬೇತಿ ಪಡೆಯಬಹುದಾಗಿದೆ. ಜೊತೆಗೆ ಇದರಿಂದ ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.