ಹೊಸದಿಲ್ಲಿ: ಪಾಕಿಸ್ತಾನವು ತನ್ನ ಹೆಚ್ಚುತ್ತಿರುವ ಸಾಲವನ್ನು ಪಾವತಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶ (Poಏ) ಗಿಲ್ಗಿಟ್-ಬಾಲ್ಟಿಸ್ತಾನ್ (ಉಃ) ಅನ್ನು ಚೀನಾಕ್ಕೆ ಗುತ್ತಿಗೆ ನೀಡುವ ಸಾಧ್ಯತೆ ಇದೆ. ಈ ಕುರಿತು ಕಾರಕೋರಂ ರಾಷ್ಟಿçÃಯ ಚಳವಳಿಯ ಅಧ್ಯಕ್ಷ ಮುಮ್ತಾಜ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕವಾದ ಮತ್ತು ಪಾಕಿಸ್ತಾನದಿಂದ ನಿರ್ಲಕ್ಷಿಸಲ್ಪಟ್ಟ ಗಿಲ್ಗಿಟ್ ಬಾಲ್ಟಿಸ್ತಾನ್ ಭವಿಷ್ಯದ ಯುದ್ಧಭೂಮಿಯಾಗಬಹುದು ಎಂದು ಅವರು ಶಂಕಿಸಿದ್ದಾರೆ.
ಕಾಶ್ಮೀರದ ಉತ್ತರ ಭಾಗವು ಚೀನಾದ ಗಡಿಗೆ ಹೊಂದಿಕೊAಡಿದೆ. ತನ್ನ ಸಾಲವನ್ನು ತೀರಿಸಲು ಪಾಕಿಸ್ತಾನವು ಯಾವುದೇ ಸಮಯದಲ್ಲಿ ಅದನ್ನು ಚೀನಾಕ್ಕೆ ಹಸ್ತಾಂತರಿಸಬಹುದು ಎಂದು ಮುಮ್ತಾಜ್ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನ್, ಚೀನಾದ ದಕ್ಷಿಣ ಏಷ್ಯಾ ವಿಸ್ತರಣೆಗೆ ವರದಾನವಾಗಲಿದೆ ಎಂದು ಮಮ್ತಾಜ್ ಹೇಳಿದ್ದಾರೆ. ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಅನ್ನು ಚೀನಾಕ್ಕೆ ಹಸ್ತಾಂತರಿಸಿದರೆ, ಇದಕ್ಕಾಗಿ ಚೀನಾದಿಂದ ದೊಡ್ಡ ಮೊತ್ತವನ್ನು ಪಾಕಿಸ್ತಾನ ಪಡೆಯುವ ಸಾಧ್ಯತೆ ಇದೆ. ಇದು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ ಎಂದು ಮುಮ್ತಾಜ್ ಹೇಳಿದ್ದಾರೆ. ಆದರೆ ಮುಮ್ತಾಜ್ ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಮಾಧ್ಯಮಗಳು ಅಲ್ಲಗಳೆದಿವೆ.