ಕಲರ್‌ಫುಲ್ ಚಿತ್ರಗಳಿಗೆ ಕಪ್ಪುಬಿಳಿಪಿನ ಚಿತ್ತಾರ

    0
    183

    ಇವರು ಓದಿದ್ದು ಇಂಜಿನೀಯರಿoಗ್, ಈಗಿನ ಅಭ್ಯಾಸ ಸ್ಪರ್ಧಾತ್ಮಕ ಪರೀಕ್ಷೆಗೆ, ಆದರೆ ಇವರ ಇಂದಿನ ಬದುಕು ಸಾಗುತ್ತಿರುವುದು ಚಿತ್ರಕಲೆಯನ್ನು ಅವಲಂಬಿಸಿ..
    ಹೌದು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಂಡoತೆ ಇರುತ್ತೆ ಇವರು ಗೀಚಿದ ಚಿತ್ರ. ಸೇಮ್ ಟು ಸೇಮ್ ಕನ್ನಡಿಯಲ್ಲಿ ನೋಡಿಕೊಂಡ ಹಾಗೆ ಪೆನ್ಸಿಲ್ ಸ್ಕೆಚ್ ಮೂಲಕ ಕಪ್ಪುಬಿಳುಪಿನ ನಿಮ್ಮ ಚಿತ್ರವನ್ನು ಗೀಚುತ್ತಾರೆ. ಬಳ್ಳಾರಿ ತಾಲೂಕಿನ ಸಿಂಧುವಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಗಾದಿಲಿಂಗ ಅವರು. ಇಲ್ಲಿಯವರೆಗೆ ಇವರ ಕುಂಚದಲ್ಲಿ ಹಲವಾರು ಪ್ರಮುಖರ ಚಿತ್ರಗಳು ಅರಳಿದ್ದುಂಟು.
    ಎಲ್ಲರಂತೆ ಇರಲು ಇಷ್ಟ ಪಡದ ಇವರು ತಮ್ಮ ಊರಲ್ಲಿ ಅದುವರೆಗೂ ಯಾರೂ ಮಾಡಿರದ ಇಂಜಿನೀಯರಿAಗ್ ಕೋರ್ಸ್ ಮಾಡಿದರು. ಒಂದಿಷ್ಟು ದಿನ ಬೆಂಗ್ಳೂರಲ್ಲಿ ಕೆಲಸ ಕೂಡ ಮಾಡಿದರು. ಅದು ಯಾವುದು ಅವರ ಮನಸ್ಸಿಗೆ ಹಿಡಿಸದೆ ಅವೆಲ್ಲಾ ಬಿಟ್ಟು ಮತ್ತೆ ಊರಿನ ಕಡೆ ಮುಖ ಮಾಡಿದರು. ಈ ಮೂಲಕ ಇವರು ಚಿಕ್ಕಂದಿನಿAದ ಹೆಚ್ಚು ಆಸಕ್ತಿಯಿದ್ದ ಚಿತ್ರಕಲೆ ಮುಂದುವರೆಸಿಕೊoಡು ಹೋಗುವ ಕೆಲಸ ಮಾಡುತ್ತಿದ್ದಾರೆ.
    ಯಾವುದೇ ಸ್ಕೂಲ್‌ನಲ್ಲಿ ತರಬೇತಿ ಪಡೆದಿಲ್ಲ: ಇವರು ಬಿಡಿಸುವ ಚಿತ್ರಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಇವರು ಯಾವುದಾದರು ಚಿತ್ರಕಲೆ ಶಾಲೆಯಲ್ಲಿ ತರಬೇತಿ ಪಡೆದಿರಬೇಕು ಅಂತ ಅನಿಸುವುದು ಸಹಜ. ಆದರೆ ಇವರು ಚಿತ್ರಕಲೆ ಕಲಿಯಬೇಕು ಅಂತ ಯಾವುದೇ ತರಬೇತಿ ಶಾಲೆಗೆ ಹೋದವರಲ್ಲ. ಬದಲಾಗಿ ಚಿಕ್ಕವಯಸ್ಸಿನಲ್ಲಿ ಬಳಪ ಹಿಡಿದು ಸ್ಲೇಟಿನ ಮೇಲೆ, ಬಣ್ಣದ ಗೋಡೆಯ ಮೇಲೆ ಗೀಚುತ್ತಿದ್ದ ಗೀಳು ಇಂದಿಗೂ ಅವರೊಂದಿಗಿದೆ.

    Previous articleಜೆಸ್ಕಾಂ ಅಧಿಕಾರಿ ವಿಜಯಕುಮಾರ್ ಮನೆ ಮೇಲೆ ಎಸಿಬಿ ದಾಳಿ
    Next articleಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ; ಟಿ ರಾಮಾಂಜನೇಯ

    LEAVE A REPLY

    Please enter your comment!
    Please enter your name here