ಟೋಕಿಯೊ – ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತ ಭಾರತದ ಪಿ.ವಿ ಸಿಂಧು ಅವರು ಭಾನುವಾರ ನಡೆದ ಜೆ ಗುಂಪಿನ ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೋಲಿಕಾರ್ಪೋವಾ ಅವರನ್ನು ಸೋಲಿಸುವ ಮೂಲಕ ತಮ್ಮ ಅಭಿಯಾನಕ್ಕೆ ಗೆಲುವು ತಂದುಕೊಟ್ಟರು.
ಸಿಂಧು ಕೇವಲ 29 ನಿಮಿಷಗಳಲ್ಲಿ ಪೋಲಿಕಾರ್ಪೋವಾ ಅವರನ್ನು 21-7, 21-10ರಿಂದ ಸೋಲಿಸಿದರು. ಮೊದಲ ಗೇಮ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಸಿಂಧು ಗೆಲುವು ದಾಖಲಿಸಿದರು. ಮೈದಾನದ ಮೂಲೆ ಮೂಲೆಗೂ ಎದುರಾಳಿಯನ್ನು ಸುತ್ತಾಡಿಸಿದ ಸಿಂಧು ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿದರು.