ಬೆಳಗಾಯಿತು ವಾರ್ತೆ
ಬಳ್ಳಾರಿ: ಸುಪ್ರೀಂ ಹಿರೋ ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಅವರ ಮೊಟ್ಟ ಮೊದಲನೇ ಚಿತ್ರ ಓ ಮೈ ಲವ್ ಚಿತ್ರ ಇದೇ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಮೋಷನ್ ಗೋಸ್ಕರ ಚಿತ್ರ ತಂಡ ಬಳ್ಳಾರಿಗೆ ಆಗಮಿಸಿತ್ತು.
ನಗರದ ಪತ್ರಿಕ ಭವನದಲ್ಲಿ ಮಂಗಳವಾರ ಓ ಮೈ ಲವ್ ಚಿತ್ರದ ಚಿತ್ರ ತಂಡ ಸುದ್ದಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ನಿರ್ದೇಶಕ ಸ್ಮೈಲ್ ಸೀನು ಅವರು ಮಾತನಾಡಿ ಸ್ಟಾರ್ ಹಿರೋ ಶಶಿಕುಮಾರ್ ಅವರ ಮಗನಾದ ಅಕ್ಷಿತ್ ಅವರ ಮೊದಲ ಚಿತ್ರ ಇದಾಗಿದ್ದು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಹಾಡುಗಳು, ಟೀಸರ್, ಗ್ಲಿಂಪ್ಸ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿರುವ ಈ ಸಿನಿಮಾಕ್ಕೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಲೇ ಇದೆ.
ಚಿತ್ರದಲ್ಲಿ ಲವ್, ಸ್ನೇಹ, ಆಕ್ಷನ್, ಕಾಮಿಡಿ, ಎಂಟರ್ ಟೈನ್ ಮೆಂಟ್, ಎಮೋಷನ್ ಎಲ್ಲಾ ಎಮೋಷನ್ ಗಳು ಇದ್ದು ಚಿತ್ರ ನೋಡಿದವರು ಓ ಮೈ ಲವ್ ಎನ್ನದೇ ಓ ಮೈ ಗಾಡ್ ಎಂದು ಹೊರಗಡೆ ಬರುತ್ತಾರೆ. ಇದೂಂದು ಕುಟುಂಬ ಸಮೇತರಾಗಿ ನೋಡುವ ಚಿತ್ರವಾಗಿದೆ ಎಂದರು.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ. ತಲುಗು ಚಿತ್ರರಂಗದ ಸಿನಿಮಾಬ್ರಹ್ಮ, ಕೆ.ರಾಘವೇಂದ್ರರಾವ್, ಮಾಜಿ, ಪೊಲೀಸ್ ಆಯುಕ್ತರಾದ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಡು ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ, ಸಾಥ್ ನೀಡಿದ್ದಾರೆ. ಇದೀಗ ರಾಜಕೀಯ ಧುರೀಣ’ ‘ಶ್ರೀರಾಮುಲು ‘ಓ ಮೈ ಲವ್’ ಟೇಲರ್ ಬಿಡುಗಡೆ ಮಾಡಿಕೊಟ್ಟು ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ ಎಲ್ಲಾರಿಗೂ ಧನ್ಯವಾದಗಳು ಎಂದರು.
ನಟ ಅಕ್ಷಿತ್ ಶಶಿಕುಮಾರ್ ಅವರು ಮಾತನಾಡಿ ಅಪ್ಪಾಜಿ ನನ್ನ ಸಿನಿಮಾದಲ್ಲಿನ ಡ್ಯಾನ್ಸ್ ಮತ್ತು ಚಿತ್ರದ ಟೈಲರ್ ನೋಡಿ ನನ್ನ ತಂದೆ ಮೊದಲ ಬಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅದೂ ಪ್ರಪಂಚದಲ್ಲಿನ ಖುಷಿಯಲ್ಲಾ ತಂದು ಕೊಟ್ಟಂತೆ ಆಗಿದೆ. ಅಪ್ಪನನ್ನು ಸುಪ್ರೀಂ ಹೀರೋ ಎಂದು ಕರೆಯಲಾಗುತ್ತದೆ ಅವರ ಹೆಸರು ಕಾಪಾಡಿಕೊಂಡು ಜವಾಬ್ದಾರಿ ನನ್ನ ಮೇಲಿದ್ದು ಅದಕ್ಕೆ ತಕ್ಕಂತೆ ಚಿತ್ರ ತಂಡ ಕೆಲಸ ಮಾಡಿದೆ ಎಂದರು.
ಕರ್ನಾಟಕದ ಜನತೆ ನಮ್ಮ ತಂದೆಯ ಮೇಲೆ ಅಪಾರವಾದ ಪ್ರೀತಿಯನ್ನು ತೋರಿದ್ದಾರೆ ನನ್ನ ಅಪ್ಪನಿಗೆ ಬೆಂಬಲ ನೀಡಿದ್ದೀರಿ ಅದರಂತೆ ನನಗೂ ಎಲ್ಲಾರು ಬೆಂಬಲ ನೀಡುತ್ತೀರಿ ಎಂದು ಕೊಂಡಿದ್ದೇನೆ.