ನವದೆಹಲಿ: ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿದ ಹೇಳಿಕೆಯಿಂದ ದೇಶಾದ್ಯಂತ ಉದ್ವಿಗ್ನತೆಯನ್ನು ಉಂಟುಮಾಡಿದ್ದಕ್ಕಾಗಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ದೂಷಿಸಿದ್ದು ಅವರು ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಹೇಳಿದೆ.
ದೇಶದಾದ್ಯಂತ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದು, ದೇಶದಲ್ಲಿ ಏನಾಗುತ್ತಿದೆಯೋ ಅದಕ್ಕೆ ನೂಪುರ್ ಶರ್ಮಾ ಅವರೇ ಜವಾಬ್ದಾರರು. “ನೂಪುರ್ ಶರ್ಮಾ ಅವರ ಚರ್ಚೆಯನ್ನು ನಾನು ನೋಡಿದ್ದೇವೆ. ಅವರು ಚರ್ಚೆಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿ ನಂತರ ನಾನು ವಕೀಲೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಟಿವಿ ಚರ್ಚೆಯ ಸಂದರ್ಭದಲ್ಲಿ ಮಾಡಿದ ನೂಪುರ್ ಶರ್ಮಾ ಅವರ ಆಕ್ಷೇಪಾರ್ಹ ಕಾಮೆಂಟ್‌ಗಳು ಭಾರತದಲ್ಲಿ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿದವು ಮತ್ತು ಹಲವಾರು ಗಲ್ಫ್ ದೇಶಗಳು ಭಾರತೀಯ ರಾಜತಾಂತ್ರಿಕರನ್ನು ಕರೆಸಿ ತೀವ್ರ ವಾಗ್ದಂಡನೆಗಳನ್ನು ನೀಡಿದ್ದವು.