ಬೆಂಗಳೂರು-ಕೇರಳದಲ್ಲಿ ನಿಫಾ ವೈರಸ್ ಸೋಂಕು ಪತ್ತೆ ಹಿನ್ನಲೆಯಲ್ಲಿ ರಾಜ್ಯದ ಗಡಿಜಿಲ್ಲೆಗಳಾದ ಮಂಗಳೂರು ಸೇರಿದಂತೆ ಮತ್ತಿತರ ಗಡಿಜಿಲ್ಲೆಗಳಲ್ಲಿ ಸರ್ಕಾರ ಹೈ ಅಲರ್ಟ್ ಘೋಷಿಸಿದ್ದು, ಜಿಲ್ಲಾಧಿಕಾರಕ್ಕೆ ವರದಿ ಕೇಳಲಾಗಿದೆ.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ, ಗಡಿ ಜಿಲ್ಲೆಗಳಲ್ಲಿ ನಿಫಾ ವೈರಸ್ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಬೇಕು.ಗಡಿ ಜಿಲ್ಲೆಗಳಿಗೆ ಕೇರಳದಿಂದ ಬರುವವರ ಮೇಲೆ ನಿಗಾವಹಿಸಬೇಕು ಎಂದು ಸೂಚಿಸಿದ್ದಾರೆ. ಸಚಿವರಿಂದ ಮಾಹಿತಿ ಪಡೆದಿರುವ ಸಿಎಂ ಬೊಮ್ಮಾಯಿ, ನಿಫಾ ವೈರಸ್ ತಡೆಗೆ ಇನ್ನಷ್ಟು ಕಠಿಣ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಿ ವರದಿ ನೀಡುವಂತೆ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿಂದು ಸ್ಪಷ್ಟಪಡಿಸಿರುವ ಸಿಎಂ ಬೊಮ್ಮಾಯಿ, ನಿಫಾ ವೈರಸ್ ತಡೆಗೆ ಇನ್ನಷ್ಟು ಕ್ರಮಕ್ಕೆ ಸೂಚನೆ ನೀಡಿ ನಿಫಾ ವೈರಸ್ ಬಗ್ಗೆ ವರದಿ ಕೇಳಿದ್ದೇನೆ ಎಂದರು