ಬೆಳಗಾಯಿತು ವಾರ್ತೆ
ಬಳ್ಳಾರಿ: ಮತದಾರರ ಪಟ್ಟಿಯ ಪರಿಷ್ಕರಣೆಯು ಇದೇ ನ.07 ರಿಂದ ಪ್ರಾರಂಭವಾಗಿದ್ದು, ಸಾರ್ವಜನಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ನಮೂನೆ-6, ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಡಲು ನಮೂನೆ-7, ತಿದ್ದುಪಡಿಗಾಗಿ ನಮೂನೆ-8 ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಭಾಗದ ಸಂಖ್ಯೆಯಿAದ ಇನ್ನೊಂದು ಭಾಗದ ಸಂಖ್ಯೆಗೆ ವರ್ಗಾವಣೆಗೊಳಿಸಲು ನಮೂನೆ-8ಎ ರಲ್ಲಿ ಅರ್ಜಿಗಳನ್ನು ಸಂಬAಧ ಪಟ್ಟ ಮತಗಟ್ಟೆ ಹಂತದ ಅಧಿಕಾರಿಗಳಲ್ಲಿ ಪಡೆದು ಭರ್ತಿ ಮಾಡಿ ಡಿ.8 ರೊಳಗಾಗಿ ಸಲ್ಲಿಸಲು ಬಹುದು.
ನ.7, 14, 21 ಹಾಗೂ 28ರಂದು ವಿಶೇಷ ಪ್ರಚಾರ ದಿನಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಂದ ಸ್ವೀಕೃತವಾಗುವ ಎಲ್ಲಾ ನಮೂನೆಗಳನ್ನು ಹತ್ತಿರದ ಕೇಂದ್ರಗಳಲ್ಲಿ ಹಾಜರಿರುವ ಮತಗಟ್ಟೆ ಹಂತದ ಬಿಎಲ್‌ಓ ಅಧಿಕಾರಿಗಳಿಗೆ ನೇರವಾಗಿ ನೀಡಬಹುದಾಗಿದೆ.
ಸಾರ್ವಜನಿಕರು ವೆಬ್‌ಸೈಟ್ www.voterportal.eci.gov.in ಲಾಗಿನ್ ಮಾಡುವ ಮೂಲಕ ಮತದಾರರ ಗುರುತಿನ ಚೀಟಿ ಪಡೆಯಬಹುದಾಗಿದೆ.
ಮತಗಟ್ಟೆ ಹಂತದ ಅಧಿಕಾರಿಗಳ ವಿವರ