ಗಂಗಾವತಿ:ಸರಕಾರದ ನರೇಗಾ ಯೋಜನೆ ಅಡಿಯಡಿಯಲ್ಲಿ ಸಮುದಾಯಿಕ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ, ಕೂಲಿಕಾರರು ಇದರ ಪ್ರಯೋಜನ ಪಡೆಯಬೇಕು ಎಂದು ತಾಪಂ ಐಇಸಿ ಸಂಯೋಜಕ, ಪತ್ರಕರ್ತ ಶಿವಕುಮಾರ ತಿಳಿಸಿದರು. ತಾಲೂಕಿನ ಹನುಮನಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೋಜಗಾರ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.