ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸ್ತ್ರೀ ಶಕ್ತಿ ಸಂಘಟನಾ ಸಮಿತಿ ವತಿಯಿಂದ ನಾ ನಾಯಕಿ ಮೊದಲ ಪ್ರಾಯೋಗಿಕ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಕೆ ಎಸ್ ಆರ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ರಾದ ಡಿ.ಕೆ ಶಿವ ಕುಮಾರ್ ಅವರು ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ತದನಂತರ ದಿನಗಳಲ್ಲಿ ನಮ್ಮ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ಸ್ಥಾನ ಮಾನ ನೀಡಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷದಲ್ಲಿ ಆನಿಬೆಸೆಂಟ್, ಸರೋಜಿನಿ ನಾಯ್ಡು, ಇಂದಿರಾಗಾಂಧಿ, ಸೋನಿಯಗಾಂಧಿ ಸೇರಿದಂತೆ ಹಲವು ಮಹಿಳೆಯರಿಗೆ ಉನ್ನತ ಸ್ಥಾನ ಮಾನ ನೀಡಲಾಗಿದೆ. ಮಹಿಳೆಯರನ್ನು ಆರ್ಥಿಕ, ಸಾಮಾಜಿಕ,ರಾಜಕೀಯ ಸೇರಿದಂತೆ ಎಲ್ಲಾ ರಂಗದಲ್ಲೂ ಮುಖ್ಯ ವಾಹಿನಿಗೆ ತೆರಬೇಕಾಗಿದೆ ಎಂದರು.
ಮೊದಲ ಬಾರಿಗೆ ಬಳ್ಳಾರಿ ನಗರದಲ್ಲಿ ನಾ ನಾಯಕಿ ಪ್ರಾಯೋಗಿಕ ಉದ್ಘಾಟನಾ ಸಮಾರಂಭವನ್ನು ನಾ ನಾಯಕಿ ಸಮಿತಿಯ ಅಧ್ಯಕ್ಷರಾದ ಉಮಾಶ್ರೀ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಮಂಜುಳಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಮಹಿಳೆಯರಿಗೆ ಸಮಾನವಾದ ಗೌರವ ಸ್ಥಾನ ಮಾನ ನೀಡುವಂತಾಗಬೇಕು ಎನ್ನುವುದೇ ನನ್ನ ಆಶಯ ಇಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ನಾಯಕಿಯರೇ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಜ್ಯ ಮಟ್ಟದವರೆಗೂ ನಮ್ಮ ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬ ಮಹಿಳೆಯರಿಗೂ ನಾಯಕತ್ವ ಸ್ಥಾನ ಮಾನ ನೀಡುತ್ತಿದೆ ಎಲ್ಲಾ ಮಹಿಳೆಯರು ಸಹಕರಿಸಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರಲು ಶ್ರಮವಹಿಸಿ ಎಂದರು.
ನಾ ನಾಯಕಿ ಸಮಿತಿಯು ಮಹಿಳೆಯರ ಸಮಸ್ಯೆ ಸವಾಲುಗಳನ್ನು ಎದುರಿಸುವಲ್ಲಿ ಪ್ರತಿ ಹೆಜ್ಜೆಯಲ್ಲೂ ಮುಂದಿರುತ್ತದೆ ಇದನ್ನು ಎಲ್ಲ ಮಹಿಳೆಯರು ಸದುಪಯೋಗ ಪಡೆದುಕೊಂಡು ಸಂಘಟನೆಯನ್ನು ಬಲಪಡಿಸುವಲ್ಲಿ ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾ ನಾಯಕಿ ಸಮಿತಿ ಅಧ್ಯಕ್ಷ ರಾದ ಉಮಾಶ್ರೀ ಅವರು ಮಾತನಾಡಿ ಡಿಕೆ ಶಿವಕುಮಾರ್ ಅವರ ಕನಸಿನ ಕೂಸು ನಾ ನಾಯಕಿ ಕಾರ್ಯಕ್ರಮ ಈ ಮೂಲಕ ಮಹಿಳಾ ಶಕ್ತಿಯನ್ನು ಪುನಃಚ್ಛೇತಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮಂಜುಳಾ, ಮಾಜಿ ಸಚಿವೆ ಮೋಟಮ್ಮ, ರಾಜ್ಯ ಮಹಿಳಾ ಆಯೋಗದ ಮಂಜುಳಾ ನಾಯ್ಡು, ರಾಜ್ಯ ಮಹಿಳಾ ಅಧ್ಯಕ್ಷರಾದ ಪುಷ್ಪ ಅಮರನಾಥ್, ಮಲ್ಲಿಕಾ ಘಂಟಿ ಸೇರಿದಂತೆ ಇತರರು ಇದ್ದರು.