ಬೆಳಗಾಯಿತು ವಾರ್ತೆ
ಬಳ್ಳಾರಿ: ತನ್ನ ಪತ್ನಿಗೆ ಬೈದ ಎಂಬ ಕಾರಣಕ್ಕೆ ಶ್ರೀರಾಮ್ ಎಂಬ ವ್ಯಕ್ತಿ ತಮ್ಮಣ್ಣ ಎಂಬುವವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಶನಿವಾರ ನಗರದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತ ತಮ್ಮಣ್ಣ (43) ಆಂದ್ರದ ರಾಯದುರ್ಗ ತಾಲ್ಲೂಕಿನ ಚಂದಂ ಡೊಡ್ಡಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಇವರಿಬ್ಬರೂ ಸ್ನೇಹಿತರಾಗಿದ್ದು, ಆಂದ್ರದಿಂದ ಬಳ್ಳಾರಿಗೆ ಕಟ್ಟಡ ಕೆಲಸಕ್ಕೆ ಬಂದಿದ್ದರು ಎನ್ನಲಾಗಿದೆ.
ಸದ್ಯ ಶ್ರೀರಾಮ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.